ಪಂಚಾಯ್ತಿಯಲ್ಲೇ ಸಿಗಲಿದೆ ಮದುವೆ ಸರ್ಟಿಫಿಕೇಟ್

Webdunia
ಭಾನುವಾರ, 17 ಏಪ್ರಿಲ್ 2022 (15:56 IST)
ಬೆಂಗಳೂರು : ಇನ್ನು ಮುಂದೆ ಗ್ರಾಮ ಪಂಚಾಯ್ತಿಯಲ್ಲೇ ಮದುವೆ ಸರ್ಟಿಫಿಕೇಟ್ ಸಿಗಲಿದೆ.

ಈ ಸಂಬಂಧ ಇಂದು ಸರ್ಕಾರ ಅಧಿಕೃತ ಆದೇಶವೊಂದನ್ನು ಹೊರಡಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಸರ್ಕಾರ ವಿವಾಹ ನೊಂದಣಿ ಅಧಿಕಾರವನ್ನು ಪಿಡಿಓಗಳಿಗೆ ಸರ್ಕಾರ ನೀಡಿದೆ.

ಹೀಗಾಗಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಇನ್ನು ಮುಂದೆ ಮದುವೆ ನೋಂದಣಿಗೆ ಅವಕಾಶ ನೀಡಲಾಗುತ್ತಿದೆ. 

ಇಷ್ಟು ದಿ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಮದುವೆ ನೋಂದಣಿಗೆ ಅವಕಾಶ ಇತ್ತು. ಮದುವೆ ನಡೆದ ಸ್ಥಳ ಅಥವಾ ಪತಿ-ಪತ್ನಿಯರು ವಾಸಿಸುವ ಸ್ಥಳದ ಅಧಿಕಾರ ವ್ಯಾಪ್ತಿ ಹೊಂದಿರುವ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕಿತ್ತು.

ಅದಕ್ಕೆ ಅಗತ್ಯವಾದ ಅರ್ಜಿ ನಮೂನೆ ಅದೇ ಕಚೇರಿಯಲ್ಲಿ ದೊರೆಯುತ್ತಿತ್ತು. ಇಲ್ಲವೇ ಅದನ್ನು ಇಂಟರ್ನೆಟ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿತ್ತು.

ಈ ಅರ್ಜಿಯನ್ನು ಎಚ್ಚರಿಕೆಯಿಂದ ತುಂಬಿ ನಂತರ ಮೂವರು ಸಾಕ್ಷಿಗಳು (ಸ್ನೇಹಿತರು, ಬಂಧುಗಳು) ಸಹಿ ಮಾಡಬೇಕಿತ್ತು.

ಈ ಅರ್ಜಿಗೆ ವಧು-ವರ ಕೂಡ ಅಹಿ ಮಾಡಿ, ನಂತರ ಅದಕ್ಕೆ ಮೊಹರು ಹಾಕಿ ರಿಜಿಸ್ಟ್ರಾರ್ ಸಹಿ ಮಾಡುತ್ತಿದ್ದರು. ಆದರೆ ಇನ್ಮುಂದೆ ಗ್ರಾಮ ಪಂಚಾಯತಿ ಪಿಡಿಓಗೆ ಮದುವೆ ನೋಂದಣಿ ಅಧಿಕಾರವನ್ನು ಸರ್ಕಾರ ಕೊಟ್ಟಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸುಳ್ಯ: ಆನೆ ದಾಳಿಗೆ ಪೋಷಕರೇ ಎದುರೇ ಉಸಿರುನಿಲ್ಲಿಸಿದ ಪಿಯುಸಿ ವಿದ್ಯಾರ್ಥಿನಿ ಸಾವು

ಸೌದಿ ಅರೇಬಿಯಾದ ಅತೀ ದೊಡ್ಡ ತೈಲ ಘಟಕಕ್ಕೇ ಇರಾನ್ ದಾಳಿ: ಜಗತ್ತಿನ ಮೇಲಾಗುವ ಪರಿಣಾಮವೇನು

ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರಿಗೆ ಧೈರ್ಯದ ಮಾತು ಹೇಳಿದ ಸಿದ್ದರಾಮಯ್ಯ

ನಾಗ್ಪುರ ಕಾರ್ಖಾನೆ ಸ್ಫೋಟದಲ್ಲಿ 18ಮಂದಿ ಸಾವು ಪ್ರಕರಣ, ಮಹತ್ವದ ಬೆಳವಣಿಗೆ

ಎಲ್ಲರಿಗೂ ಫ್ರೀ ಗ್ಯಾರಂಟಿ ಕೊಡೋದು ಕಷ್ಟ: ಎಚ್ ಸಿ ಬಾಲಕೃಷ್ಣ

ಮುಂದಿನ ಸುದ್ದಿ
Show comments