Daily Horoscope
✕

ಬಿಜೆಪಿಯವರಿಗೆ ಸರಿಯಾಗಿ ಪೆಂಡಾಲ್ ಹಾಕಕ್ಕೂ ಬರಲ್ವಾ? ಮಮತಾ ಬ್ಯಾನರ್ಜಿ ಲೇವಡಿ

Webdunia
ಭಾನುವಾರ, 22 ಜುಲೈ 2018 (09:24 IST)
ಕೋಲ್ಕೊತ್ತಾ: ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪೆಂಡಾಲ್ ಕುಸಿದ ಘಟನೆಯನ್ನು ನೆನಪಿಸಿ ಪ.ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.

ಪ್ರಧಾನಿ ಕೋಲ್ಕೊತ್ತಾದ ರ್ಯಾಲಿಯೊಂದರಲ್ಲಿ ಭಾಗವಹಿಸಿದ್ದಾಗ ಪೆಂಡಾಲ್ ಕುಸಿದು 90 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ನಿನ್ನೆ ತಮ್ಮ ಪಕ್ಷದ ಸಮಾವೇಶವೊಂದರಲ್ಲಿ ಮಾತನಾಡಿದ ಮಮತಾ ಇದೇ ಘಟನೆಯನ್ನು ನೆನಪಿಸಿ ಬಿಜೆಪಿಯವರಿಗೆ ಸರಿಯಾಗಿ ಪೆಂಡಾಲ್ ಹಾಕಲೂ ಬರಲ್ವಾ ಎಂದು ಲೇವಡಿ ಮಾಡಿದ್ದಾರೆ.

ಅಷ್ಟೇ ಅಲ್ಲದೆ, ಸಮಾವೇಶದಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಶಾಕ್ ಕಾದಿದೆ. ಸಂಸತ್ತಿನಲ್ಲಿ 100 ಸೀಟು ಕೂಡಾ ಗೆಲ್ಲಲ್ಲ ಎಂದಿದ್ದಾರೆ.

ಅವಿಶ್ವಾಸ ಮತದಲ್ಲಿ ಪ್ರಚಂಡ ಗೆಲುವು ಸಾಧಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಇದು ಸಂಸತ್ತಿನ ಒಳಗಿನ ಗೆಲುವಷ್ಟೇ. ಹೊರಗೆ ಬಂದರೆ ಅವರಿಂದ ಬಹುಮತದ ಗೆಲುವು ಸಾಧ್ಯವಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೇಶವನ್ನು ಯಾಕೆ ಹಾಳು ಮಾಡ್ತಿದ್ದೀರಿ.. ದೆಹಲಿ ವಿಮಾನ ನಿಲ್ದಾಣದಲ್ಲಿ ಅಭಿಜಿತ್ ದಿಪ್ಕೆ ತರಾಟೆಗೆ ತೆಗೆದುಕೊಂಡ ಪಬ್ಲಿಕ್ Video

ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊರಲಿದ್ದಾನೆ ಪ್ರಶಾಂತ್ ಆನೆ

ಚಿನ್ನದ ಚೈನ್ ಎಂದುಕೊಂಡು ನಕಲಿ ಚಿನ್ನದ ಸರ ಕದ್ದ ಕಳ್ಳ: ಯುವತಿಯ ರಿಯಾಕ್ಷನ್ ಗೆ ನಗು ಗ್ಯಾರಂಟಿ Video

ಚಿಕನ್ ಖರೀದಿಸುತ್ತಿದ್ದ ವ್ಯಕ್ತಿ ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಸಾವು: Viral video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments