ಚೆನ್ನೈ: ಡಿಎಂಕೆ ನಾಯಕ, ತಮಿಳುನಾಡು ಮಾಜಿ ಸಿಎಂ ಎಂ ಕರುಣಾನಿಧಿ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದು, ಅವರನ್ನು ನೋಡಲು ಗೋಪಾಲಪುರಂ ಬಳಿಯ ನಿವಾಸಕ್ಕೆ ನಾಯಕರ ದಂಡೇ ಹರಿದುಬರುತ್ತಿದೆ.
ಇತ್ತೀಚೆಗಿನ ದಿನಗಳಲ್ಲಿ ಸಾರ್ವಜನಿಕ ಜೀವನದಿಂದ ದೂರವಾಗಿರುವ 94 ವರ್ಷದ ಕರುಣಾನಿಧಿ ಆರೋಗ್ಯದ ಬಗ್ಗೆ ಕಾವೇರಿ ಆಸ್ಪತ್ರೆಯ ವೈದ್ಯರು ನಿಗಾ ವಹಿಸಿದ್ದಾರೆ. ಇನ್ನು, ಅವರ ಆರೋಗ್ಯದ ಬಗ್ಗೆ ಹರಿದಾಡುವ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಪುತ್ರ ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಮನವಿ ಮಾಡಿದ್ದಾರೆ.
ಇನ್ನು, ತಮಿಳುನಾಡು ಡಿಸಿಎಂ ಒ ಪನೀರ್ ಸೆಲ್ವಂ ಸೇರಿದಂತೆ ಸಚಿವರ ದಂಡೇ ಹರಿದುಬಂದಿದೆ. ಇತ್ತೀಚೆಗಷ್ಟೇ ರಾಜಕೀಯಕ್ಕೆ ಎಂಟ್ರಿಯಾಗಿರುವ ಕಮಲ್ ಹಾಸನ್ ಕೂಡಾ ಕರುಣಾನಿಧಿ ನಿವಾಸಕ್ಕೆ ಆಗಮಿಸಿದ್ದಾರೆ.
ಜ್ವರ, ಮೂತ್ರದ ಸೋಂಕು ಸಮಸ್ಯೆಯಿಂದ ಕರುಣಾನಿಧಿ ಬಳಲುತ್ತಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸದೇ ಮನೆಯಲ್ಲೇ ಚಿಕಿತ್ಸೆ ಕೊಡಿಸಲು ಕುಟುಂಬ ವರ್ಗ ತೀರ್ಮಾನಿಸಿದೆ. ಹೀಗಾಗಿ ಕಾವೇರಿ ಆಸ್ಪತ್ರೆಯ ವೈದ್ಯರು ಕರುಣಾನಿಧಿ ನಿವಾಸದಲ್ಲಿ ಬೀಡುಬಿಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.