ಇಸ್ಲಾಮಾಬಾದ್: ಪಾಕಿಸ್ತಾನದ ರಾಷ್ಟ್ರೀಯ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪಕ್ಷ ಪಿಟಿಐ ಇದೀಗ ಸರ್ಕಾರ ರಚನೆಯತ್ತ ದಾಪುಗಾಲಿಟ್ಟಿದೆ.
ಬಹುಮತವಿಲ್ಲದಿದ್ದರೂ ಸಣ್ಣ ಪುಟ್ಟ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಲು ಇಮ್ರಾನ್ ಖಾನ್ ಸಿದ್ಧತೆ ನಡೆಸಿದ್ದಾರೆ. ಪಾಕಿಸ್ತಾನಕ್ಕೆ ವಿಶ್ವಕಪ್ ಗೆಲುವು ಕೊಡಿಸಿದ್ದ ಕ್ರಿಕೆಟ್ ತಂಡದ ನಾಯಕನಾಗಿದ್ದ ಇಮ್ರಾನ್ ಖಾನ್ ಇದೀಗ ರಾಷ್ಟ್ರಕ್ಕೇ ಕ್ಯಾಪ್ಟನ್ ಆಗಲು ಹೊರಟಿದ್ದಾರೆ.
ಆದರೆ ಇಮ್ರಾನ್ ಖಾನ್ ಸದಾ ಭಾರತದ ವಿರುದ್ಧ ಕೆಂಡ ಕಾರುತ್ತಿದ್ದವರು. ಹೀಗಾಗಿ ಅವರು ಸಾಂಪ್ರದಾಯಿಕ ಎದುರಾಳಿ ರಾಷ್ಟ್ರದ ನಾಯಕರಾದರೆ ಭಾರತಕ್ಕೆ ಅಪಾಯ ತಪ್ಪಿದ್ದಲ್ಲ. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಕಾಶ್ಮೀರ ಸಮಸ್ಯೆಗೆ ಸೇನಾ ಕಾರ್ಯಾಚರಣೆ ಅಗತ್ಯ ಎಂಬಿತ್ಯಾದಿ ಅವರ ಆಕ್ರಮಣಕಾರಿ ಹೇಳಿಕೆಗಳು ಭಾರತದ ಜತೆಗಿನ ಸ್ನೇಹಕ್ಕೆ ಅಡ್ಡಿಯಾಗಬಹುದು.
ಹಾಗಿದ್ದರೂ ಅಧಿಕಾರದ ಗದ್ದುಗೇರುವ ಮೊದಲು ತಾವು ಭಾರತದೊಂದಿಗೆ ಸ್ನೇಹ ಬಯಸುವುದಾಗಿ ಇಮ್ರಾನ್ ಹೇಳಿಕೆ ನೀಡಿದ್ದಾರೆ. ಆದರೆ ಭಾರತ ಒಂದು ಹೆಜ್ಜೆ ಮುಂದಿಟ್ಟರೆ, ನಾವು ಎರಡು ಹೆಜ್ಜೆ ಮುಂದಿಡುವುದಾಗಿ ಸಣ್ಣದೊಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.