ಕಲಬುರಗಿಯಲ್ಲಿ ಮಾತನಾಡಿದ ಲೋಕಸಭೆಯ ಕೇಂದ್ರೀಯ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಬಿಜೆಪಿ ನಾಯಕರಿಗೆ ಟಾನಿಕ್ ಕೊಡಲು ಬಂದಿಲ್ಲ. ಕಾರ್ಪೇಟ್ ಬಾಂಬಿಂಗ್ ಮಾಡಲು ಬಂದಿದ್ದೇನೆ ಎಂದಿದ್ದಾರೆ. ಜೊತೆಗೆ ಈ ದೇಶದಲ್ಲಿ ಕಾಂಗ್ರೆಸ್ ಮುಕ್ತ ಮಾಡ್ತಿನಿ ಎನ್ನುವ ಮೋದಿ ಉದ್ದೇಶ ಈಡೆರಲ್ಲ ಎಂದು ಖರ್ಗೆ ಭವಿಷ್ಯ ನುಡಿದ್ರು.
ಕಲಬುರಗಿಯಲ್ಲಿನ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕದ ಜನರು ಬಿಜೆಪಿ ಮತ್ತು ಆರ್ ಎಸ್ ಎಸ್ ಸಂಘಟನೆಯ ಗುಲಾಮರಾಗಲು ಇಚ್ಚೆ ಪಡೋದಿಲ್ಲ. ಇದು ಮೋದಿ ಅರ್ಥ ಮಾಡಿಕೊಳ್ಳಬೇಕು ಎಂದ್ರು.
ಈ ಹಿಂದೆ ಜನರು ಎಮೋಷನಲ್ ಆಗಿ ಮೋದಿ ಅವರಿಗೆ ಬೆಂಬಲ ನೀಡಿದ್ದಾರೆ. ಆದ್ರೆ ಅಭಿವೃದ್ದಿ ಮಾಡದ ಹಿನ್ನಲೆ ಜನರು ಬೇಸತ್ತು ಹೋಗಿದ್ದು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ನೀಡಲಿದ್ದಾರೆ ಎನ್ನುವ ವಿಶ್ವಾಸ ಖರ್ಗೆ ವ್ಯಕ್ತಪಡಿಸಿದ್ರು. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಹವಾ ಜೋರಾಗಿದ್ದು ಈಗಗಾಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಂದು ಹೋಗಿದ್ದಾರೆ. ಇದೇ ತಿಂಗಳು 4ರಂದು ಮತ್ತೆ ಕಲಬುರಗಿಗೆ ಆಗಮಿಸಲಿದ್ದಾರೆ ಎಂದು ಖರ್ಗೆ ಹೇಳಿದ್ರು.