ತಿರುವನಂತಪುರಂ : ಕೇರಳದಲ್ಲಿ ಶೀಘ್ರವೇ ತೃತೀಯಲಿಂಗಿ ಪೊಲೀಸ್ ಅಧಿಕಾರಿಗಳನ್ನು ನೇಮಕಗೊಳಿಸುವ ಸಾಧ್ಯತೆ ಇದೆ.
ತೃತೀಯ ಲಿಂಗಿಗಳನ್ನು ರಾಜ್ಯ ಪೊಲೀಸ್ ಪಡೆಗೆ ಸೇರಿಸಿಕೊಳ್ಳಲು ಕೇರಳ ಸರ್ಕಾರ ಚಿಂತನೆ ನಡೆಸಿದೆ. ಕೇರಳ ಪೊಲೀಸ್ ಅಧಿಕಾರಿಗಳ ಸಂಘ ತೃತೀಯಲಿಂಗಿಗಳನ್ನು ಪೊಲೀಸ್ ಪಡೆಗೆ ಸೇರಿಸುವ ಕ್ರಮವನ್ನು ಬೆಂಬಲಿಸುತ್ತಿರುವುದು ಗಮನಾರ್ಹ.
ಮಹಿಳೆಯರನ್ನು ಶೇಕಡಾವಾರು ನೇಮಕಾತಿ ಮಾಡಲಾಗುತ್ತದೆ. ಆದರೆ ಈ ಕಾನೂನು ಸರಿಯಲ್ಲ. ತೃತೀಯಲಿಂಗಿಗಳನ್ನು ಪೊಲೀಸ್ ಪಡೆಗೆ ಸೇರಿಸಿಕೊಳ್ಳುವ ನಿರ್ಧಾರದಿಂದ ಲಿಂಗ ಭೇದ ಕಡಿಮೆಯಾಗಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಆರ್. ಬಿಜು ತಿಳಿಸಿದರು.