ಕಾಂಗ್ರೆಸ್ ಸಚಿವರು ರಾಜಕೀಯ ಮಾತಾಡೋ ಹಾಗಿಲ್ಲ! ಕೆಸಿ ವೇಣುಗೋಪಾಲ್ ತಾಕೀತು

Webdunia
ಸೋಮವಾರ, 2 ಜುಲೈ 2018 (09:26 IST)
ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್ ತನ್ನ ಸಚಿವರಿಗೆ ಖಡಕ್ ಸೂಚನೆಯೊಂದನ್ನು ರವಾನಿಸಿದೆ. ಇನ್ಮುಂದೆ ಸಚಿವರು ಬಹಿರಂಗವಾಗಿ ರಾಜಕೀಯ ವಿಚಾರಗಳ ಬಗ್ಗೆ ಹೇಳಿಕೆ ಕೊಡುವಂತಿಲ್ಲ ಎಂದು ಖಡಕ್ ಸೂಚನೆಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ನೀಡಿದ್ದಾರೆ.

ಬಜೆಟ್ ಮಂಡನೆ ವಿಚಾರದಲ್ಲಿ ಸಿದ್ದರಾಮಯ್ಯ ನೀಡಿದ್ದಾರೆಂಬ ಹೇಳಿಕೆಯ ವಿಡಿಯೋ ವೈರಲ್ ಆದ ಮೇಲೆ ನಡೆದ ವಿದ್ಯಮಾನಗಳ ನಂತರ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ತನ್ನ ಸಚಿವರಿಗೆ ಇಂತಹದ್ದೊಂದು ಖಡಕ್ ಸಂದೇಶ ರವಾನಿಸಿದೆ.

‘ಸಚಿವರುಗಳು ತಮ್ಮ ಇಲಾಖೆಯ ಯೋಜನೆಗಳ ಕುರಿತು, ಸಾರ್ವಜನಿಕವಾಗಿ ಮಾತನಾಡಿದರೆ ಸಾಕು. ಅದರ ಹೊರತಾಗಿ ರಾಜಕೀಯ ವಿಚಾರವಾಗಿ ಬಹಿರಂಗ ಹೇಳಿಕೆ ಕೊಡಬಾರದು’ ಎಂದು ಸಮನ್ವಯ ಸಮಿತಿ ಸಭೆ ನಂತರ ಹೇಳಿದ್ದಾರೆ.

ಇನ್ಮುಂದೆ ಸಮ್ಮಿಶ್ರ ಸರ್ಕಾರದ ಮಾಹಿತಿ ನೀಡಲು ಎರಡೂ ಪಕ್ಷಗಳ ಪರವಾಗಿ ಇಬ್ಬರು ವಕ್ತಾರರನ್ನು ನೇಮಿಸಲಾಗುವುದು. ಅವರೇ ಎಲ್ಲಾ ಅಧಿಕೃತ ಹೇಳಿಕೆ ನೀಡುತ್ತಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಖಲಿಸ್ತಾನ್ ಗುಂಪಿನಿಂದ ಕೊಲೆ ಬೆದರಿಕೆ: ಭದ್ರತೆಯಲ್ಲಿ ಮಹತ್ವದ ಬದಲಾವಣೆ

ಮಕ್ಕಳಾಗಿಲ್ಲವೆಂದು ಸೊಸೆಯೊಬ್ಬಳನ್ನು ಈ ರೀತಿ ನಡೆಸಿಕೊಳ್ಳುವುದಾ, ಹೀನಾಯ ಘಟನೆ, Video

ಡಿಕೆ ಶಿವಕುಮಾರ್ ಇಡೀ ರಾಜ್ಯದ ಸಿಎಂ, ಅದು ಮರೆಯಬಾರದು: ಬಿವೈ ವಿಜಯೇಂದ್ರ

ಒಂದೂವರೆ ತಿಂಗಳ ಬಳಿಕ ಪೂರ್ಣಪ್ರಮಾಣದಲ್ಲಿ ಸಂಪುಟ ವಿಸ್ತರಣೆಯಾಗುತ್ತಾ, ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಈ ಕೂಡಲೇ ಸರ್ಕಾರ ವಶಕ್ಕೆ ಪಡೆದಿರುವ ರೈತರನ್ನು ಬಿಡುಗಡೆ ಮಾಡಬೇಕು

ಮುಂದಿನ ಸುದ್ದಿ
Show comments