Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾ.ಚಲಮೇಶ್ವರ್ ರಾಜಕೀಯ ಪ್ರವೇಶಿಸುತ್ತಾರಾ?

ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾ.ಚಲಮೇಶ್ವರ್ ರಾಜಕೀಯ ಪ್ರವೇಶಿಸುತ್ತಾರಾ?
ನವದೆಹಲಿ , ಶನಿವಾರ, 23 ಜೂನ್ 2018 (13:24 IST)
ನವದೆಹಲಿ : ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿದ್ದ ಚಲಮೇಶ್ವರ್ ಅವರು ಶುಕ್ರವಾರ (ಜೂನ್ 22) ರಂದು ತಮ್ಮ ಸೇವೆಯಿಂದ ಅಧಿಕೃತವಾಗಿ ನಿವೃತ್ತಿ ಪಡೆದಿದ್ದು, ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಪ್ರವೇಶಿಸುತ್ತಾರೋ? ಇಲ್ಲವೋ? ಎಂಬ ಕುರಿತು ಸ್ಪಷ್ಟನೆ ನೀಡಿದ್ದಾರೆ.


ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಾಧೀಶರಲ್ಲಿ ಎರಡನೇ ಸ್ಥಾನದಲ್ಲಿರುವ ಚಲಮೇಶ್ವರ್ ಅವರು ಕಳೆದ ಏಳು ವರ್ಷಗಳಿಂದ ಉನ್ನತ ಹುದ್ದೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಈ ವರ್ಷ ಜನವರಿ 12 ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿಯ ವಿರುದ್ಧ ಸಿಡಿದೆದ್ದಿದ್ದ ನಾಲ್ವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಲ್ಲಿ ಚಲಮೇಶ್ವರ್ ಸಹ ಒಬ್ಬರು.


ಚಲಮೇಶ್ವರ್ ಅವರಲ್ಲಿ ರಾಜಕೀಯ ಪ್ರವೇಶದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ತಾವು ಎಂದಿಗೂ ರಾಜಕೀಯಕ್ಕೆ ಬರುವುದಿಲ್ಲ. ನನಗೆ ಅದು ಇಷ್ಟವಿಲ್ಲ. ಯಾವುದೇ ರೀತಿಯ ಚುನಾವಣೆಯಲ್ಲೂ ಭಾಗವಹಿಸೋಲ್ಲ’ ಎಂದಿದ್ದಾರೆ. ಹಾಗೇ ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಅವರು ನೇರವಾಗಿ ದೂರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಜ್ ಭವನಕ್ಕೆ ಟಿಪ್ಪು ಹೆಸರಿಟ್ಟರೆ ಕರ್ನಾಟಕ ಹೊತ್ತಿ ಉರಿಯುತ್ತೆ: ಕೆಜಿ ಬೋಪಯ್ಯ