Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾರತ

ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾರತ
ನವದೆಹಲಿ , ಶುಕ್ರವಾರ, 2 ಜೂನ್ 2023 (13:41 IST)
ನವದೆಹಲಿ : ಅಂತಾರಾಷ್ಟ್ರೀಯ ಪ್ರತಿಕೂಲತೆಗಳ ನಡುವೆಯೂ 2022-23ರ ಹಣಕಾಸು ವರ್ಷದಲ್ಲಿ ದೇಶದ ಆಂತರಿಕ ಉತ್ಪನ್ನ ದರ 7.2% ರಷ್ಟು ದಾಖಲಾಗಿದೆ. ಈ ಮೂಲಕ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಭಾರತ ಹೊರಹೊಮ್ಮಿದ್ದು ಒಂದನೇ ಸ್ಥಾನದಲ್ಲೇ ಮುಂದುವರಿದಿದೆ.
 
ರಾಷ್ಟ್ರೀಯ ಅಂಕಿಅಂಶ ಕಚೇರಿ ಬುಧವಾರ ಜಿಡಿಪಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. 2023-24ರ ಹಣಕಾಸು ವರ್ಷದಲ್ಲಿ ಜಿಡಿಪಿ ದರ 6.5% ರಷ್ಟು ದಾಖಲಾಗಬಹುದು  ಎಂದು ಅಂದಾಜಿಸಿದೆ. 2021-22ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ದರ 8.7% ರಷ್ಟು ದಾಖಲಾಗಿತ್ತು. 

 
ಯಾವ ತ್ರೈಮಾಸಿಕದಲ್ಲಿ ಎಷ್ಟು?
ಕಿ1 – 13.5% (ಏಪ್ರಿಲ್-ಜೂನ್, 2022)
ಕಿ2 – 6.3% (ಜುಲೈ- ಸೆಪ್ಟೆಂಬರ್, 2022)
ಕಿ3 – 4.4% (ಅಕ್ಟೋಬರ್-ನವೆಂಬರ್, 2022)
ಕಿ4 – 6.1% (ಜನವರಿ- ಮಾರ್ಚ್, 2023)

 

ಯಾವ ದೇಶದ ಜಿಡಿಪಿ ಎಷ್ಟು?
ಭಾರತ – 7.2%
ಇಂಡೋನೇಷ್ಯಾ – 5.3%
ಯುಕೆ – 4.1%
ಮೆಕ್ಸಿಕೋ -3.1%
ಚೀನಾ – 3%
ಫ್ರಾನ್ಸ್ – 2.6%
ಅಮೆರಿಕ – 2.1%
2021-22 ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ದರ 8.7% ದಾಖಲಾಗಿದ್ದರೆ ಚೀನಾ 8.1%, ಯುಕೆ 7.4% ರಷ್ಟು ದಾಖಲಾಗಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ಪಂಚ ಗ್ಯಾರಂಟಿಗೆ ಪಿಎಂ ಕಿಸಾನ್ ಯೋಜನೆಗೆ ಕತ್ತರಿ?