ನವದೆಹಲಿ : ಏಪ್ರಿಲ್-ಜೂನ್ ಮೊದಲ ತ್ರೈಮಾಸಿಕದಲ್ಲಿ ಭಾರತ 7.8% ರಷ್ಟು ಬೆಳವಣಿಗೆ ದಾಖಲಿಸುವ ಮೂಲಕ ಈ ಬಾರಿಯೂ ಚೀನಾವನ್ನು ಹಿಂದಿಕ್ಕಿದೆ.
ಕೃಷಿ, ರಿಯಲ್ ಎಸ್ಟೇಟ್ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಉತ್ತಮ ಬೆಳವಣಿಗೆ ಸಾಧಿಸಿದ ಪರಿಣಾಮ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.
2022-23ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ13.1% ಜಿಡಿಪಿ ದಾಖಲಾಗಿತ್ತು. ಇದಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. 2023ರ ಜನವರಿಯಿಂದ ಮಾರ್ಚ್ವರೆಗಿನ ಅವಧಿಯಲ್ಲಿ 6.1% ರಷ್ಟು ಜಿಡಿಪಿ ದಾಖಲಾಗಿತ್ತು. ಹಣಕಾಸು, ರಿಯಲ್ ಎಸ್ಟೇಟ್ ವಲಯ 12.2% ಬೆಳವಣಿಗೆ ಸಾಧಿಸಿದೆ. ಕೃಷಿ 3.5%, ಉತ್ಪಾದನಾ ವಲಯ 4.7%, ನಿರ್ಮಾಣ 7.9%, ವ್ಯಾಪಾರ ಕ್ಷೇತ್ರ 9.2% ಬೆಳವಣಿಗೆಯಾಗಿದೆ.
ಯಾವ ದೇಶದ್ದು ಎಷ್ಟು?
ಏಪ್ರಿಲ್-ಜೂನ್ ಅವಧಿಯಲ್ಲಿ ಭಾರತ 7.8%, ಚೀನಾ 6.3%, ಇಂಡೋನೇಷ್ಯಾ 5.17%, ರಷ್ಯಾ 4.9%, ಅಮೆರಿಕ 2.1%, ಜಪಾನ್ 2%, ದಕ್ಷಿಣ ಕೊರಿಯಾ 0.9%, ಯುಕೆ 0.4%, ಜರ್ಮನಿ -0.2%, ನೆದರ್ಲ್ಯಾಂಡ್ -0.3% ಜಿಡಿಪಿ ದಾಖಲಿಸಿದೆ.