Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪಾಕ್ ಸ್ಟಾರ್ ವೇಗಿಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಮೊದಲು ಪಾಕ್ ಗೆ ಹೊಸ ತಲೆನೋವು

ಪಾಕ್ ಸ್ಟಾರ್ ವೇಗಿಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಮೊದಲು ಪಾಕ್ ಗೆ ಹೊಸ ತಲೆನೋವು
ಮುಲ್ತಾನ್ , ಗುರುವಾರ, 31 ಆಗಸ್ಟ್ 2023 (09:10 IST)
Photo Courtesy: Twitter
ಮುಲ್ತಾನ್: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಭಾರತದ ವಿರುದ್ಧದ ಮಹತ್ವದ ಪಂದ್ಯಕ್ಕೆ ಮುನ್ನ ಪಾಕಿಸ್ತಾನದ ಸ್ಟಾರ್ ವೇಗಿ ಶಾಹಿನ್ ಅಫ್ರಿದಿ ಗಾಯಗೊಂಡಿರುವುದು ತಂಡಕ್ಕೆ ಹೊಸ ತಲೆನೋವು ಎದುರಾಗಿದೆ.

ಪಾಕ್ ತಂಡದ ಪ್ರಮುಖ ವೇಗಿ ಶಾಹಿನ್ ಅಫ್ರಿದಿ ನಿನ್ನೆ ನಡೆದಿದ್ದ ನೇಪಾಳ ವಿರುದ್ಧದ ಪಂದ್ಯದಲ್ಲಿ ಐದು ಓವರ್ ಗಳ ಬೌಲಿಂಗ್ ನಡೆಸಿ 2 ವಿಕೆಟ್ ಕೂಡಾ ಕಬಳಿಸಿದ್ದರು. ಆದರೆ ಬಳಿಕ ಕಾಲು ನೋವಿಗೆ ತುತ್ತಾಗಿದ್ದು ತಕ್ಷಣವೇ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು.

ಭಾರತದ ವಿರುದ್ಧದ ಪಂದ್ಯಕ್ಕೆ ಮುನ್ನ ವಿಶ್ರಾಂತಿ ಪಡೆದು ಮತ್ತೆ ಕಣಕ್ಕೆ ಮರಳುವ ವಿಶ್ವಾಸವಿದೆಯಾದರೂ ಪದೇ ಪದೇ ಅವರು ಗಾಯದ ಸಮಸ್ಯೆಗೀಡಾಗುತ್ತಿರುವುದು ತಂಡಕ್ಕೆ ದೊಡ್ಡ ತಲೆನೋವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ಮೊದಲ ಪಂದ್ಯದಲ್ಲಿಯೇ ವಿರಾಟ್ ಕೊಹ್ಲಿ ದಾಖಲೆ ಸನಿಹ ಬಂದ ಬಾಬರ್ ಅಜಮ್