ನವದೆಹಲಿ : ಉಕ್ರೇನ್ ವಿರುದ್ಧ ರಷ್ಯಾ ದಾಳಿ ನಡೆಸುತ್ತಿರುವ ಹಿನ್ನೆಲೆ ಭಾರತೀಯ ಶೇರು ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ದರ ಗಗನಕ್ಕೇರಿದೆ.
ಕಳೆದ ಒಂದು ವಾರದಿಂದ ದಿನದಿಂದ ದಿನಕ್ಕೆ ಅಡುಗೆ ತೈಲ ದರ ಏರಿಕೆಯಾಗುತ್ತಿದ್ದು, ಕೆಲ ಪ್ರಾವಿಷನ್ ಸ್ಟೋರ್ಗಳಿಗೆ ಸ್ಟಾಕ್ ಕೂಡ ಕಡಿಮೆ ಬರುತ್ತಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದಿಂದ ಒಂದು ಲೀಟರ್ ಅಡುಗೆ ಎಣ್ಣೆ ದರ ಬರೋಬ್ಬರಿ 30-45 ರೂ ಏರಿಕೆಯಾಗಿದೆ.
ಅಡುಗೆ ಎಣ್ಣೆಗಾಗಿ ರಷ್ಯಾದ ಮೇಲೆ ಹೆಚ್ಚಾಗಿ ಅವಲಂಬನೆಯಾಗಿರುವುದರಿಂದ ಈ ಯುದ್ಧದ ಪರಿಣಾಮವಾಗಿ ಎಲ್ಲಾ ವೆರೈಟಿ ಅಡುಗೆ ಎಣ್ಣೆಗಳ ದರ ಏರಿಕೆಯಾಗಿದೆ. ಮತ್ತೊಂದೆಡೆ ಚಿನ್ನ ಬೆಳ್ಳಿಯ ಬೆಲೆ ಕೂಡ ಏರಿಕೆಯಾಗಿದೆ.
ಸನ್ ಫ್ಯೂರ್ ಎಣ್ಣೆ – 140- 180
ಗೋಲ್ಡ್ ವಿನ್ನರ್ – 145- 166
ಪಾಮ್ ಆಯಿಲ್ – 140- 160
ಶೇಂಗಾ ಎಣ್ಣೆ – 150- 185