ಮಾಸ್ಕೋ : ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿ ಕುರಿತಾಗಿ ಸುಳ್ಳು ಸುದ್ದಿ ಹಬ್ಬಿಸುವ ಫೇಸ್ಬುಕ್, ಟ್ವಿಟ್ಟರ್ ಖಾತೆ ಮೇಲೆ ರಷ್ಯಾ ನಿಷೇಧ ಹೇರಿದೆ.
ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ತಾರತಮ್ಯ ತೋರಿದೆ ಎಂದು ಆರೋಪಿಸಿರುವ ರಷ್ಯಾದ ಮಾಧ್ಯಮ ನಿಯಂತ್ರಕ ಫೇಸ್ಬುಕ್ ಹಾಗೂ ಟ್ವಿಟ್ಟರ್ ಜೊತೆಗೆ ಬಿಬಿಸಿ, ಆ್ಯಪಲ್ ಹಾಗೂ ಗೂಗಲ್ ಆ್ಯಪ್ ಸ್ಟೋರ್ಗಳ ಮೇಲೂ ನಿರ್ಬಂಧ ಹೇರಲಾಗಿದೆ.
2020 ಅಕ್ಟೋಬರ್ನಿಂದ ರಷ್ಯಾದ ಮಾಧ್ಯಮಗಳ ಮೇಲೆ ನಿರ್ಬಂಧಕ್ಕೆ ಸಂಬಂಧಿಸಿದಂತೆ 26 ಪ್ರಕರಣ ಫೇಸ್ಬುಕ್ ದಾಖಲಿಸಿದೆ. ಕೆಲವು ನ್ಯೂಸ್ ಏಜೆನ್ಸಿ ಮೇಲಿನ ಇತ್ತೀಚಿನ ನಿರ್ಬಂಧಗಳು ಇದು ಒಳಗೊಂಡಿವೆ.
ಈ ನಡುವೆ ಫೇಸ್ಬುಕ್ ಮೇಲಿನ ನಿರ್ಬಂಧ ತೆರವುಗೊಳಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತದೆ ಎಂದು ಮೆಟಾ ಅಧ್ಯಕ್ಷ ನಿಕ್ ಕ್ಲೆಗ್ ತಿಳಿಸಿದ್ದಾರೆ.
ಉಕ್ರೇನ್ ಯುದ್ಧಕ್ಕೆ ಸಂಬಂಧಪಟ್ಟಂತೆ ನಕಲಿ ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶಿಸಿದ್ದಾರೆ.