Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಣಕಾಸು ವರ್ಷಕ್ಕೆ ಎಷ್ಟು ಬೆಳವಣಿಗೆ ನಿರೀಕ್ಷೆ?

ಹಣಕಾಸು ವರ್ಷಕ್ಕೆ ಎಷ್ಟು ಬೆಳವಣಿಗೆ ನಿರೀಕ್ಷೆ?
ನವದೆಹಲಿ , ಸೋಮವಾರ, 31 ಜನವರಿ 2022 (18:39 IST)
ನವದೆಹಲಿ : ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಸಂಸತ್ನಲ್ಲಿ ಮಂಗಳವಾರ ಮಂಡನೆಯಾಗಲಿದೆ.
 
ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷಾ ವರದಿಯನ್ನು ಇಂದು ಮಂಡಿಸಿದರು.

ಆರ್ಥಿಕ ಸಮೀಕ್ಷೆ

* 2022-23ರ ಆರ್ಥಿಕ ವರ್ಷದಲ್ಲಿ ದೇಶವು ಶೇ.8ರಿಂದ ಶೇ.8.5ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಬಹುದು.

* ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.9.2ರಷ್ಟು ಆರ್ಥಿಕ ಬೆಳವಣಿಗೆ ಅಂದಾಜಿಸಲಾಗಿದೆ. ಆದರೆ ಮುಂದಿನ ವರ್ಷದ ಆರ್ಥಿಕ ಬೆಳವಣಿಗೆ ಪ್ರಮಾಣ ಇದಕ್ಕಿಂತ ಕಡಿಮೆಯಾಗಲಿದೆ.

* ʼಫ್ರೇಜಿಲ್ ಫೈವ್ʼ ರಾಷ್ಟ್ರಗಳಿಂದ ಭಾರತವು 4ನೇ ಅತಿದೊಡ್ಡ ವಿದೇಶಿ ವಿನಿಮಯ ಮೀಸಲು ಸ್ಥಾನಕ್ಕೆ ಬಂದಿದೆ. ಇದು ತಂತ್ರಗಾರಿಕೆಗೆ ನೀತಿ ಅವಕಾಶವನ್ನು ನೀಡುತ್ತದೆ.

* 2070ರ ವೇಳೆಗೆ ಶೂನ್ಯ ಇಂಗಾಲದ ಹೊರಸೂಸುವಿಕೆ ಗುರಿಯನ್ನು ಸಾಧಿಸಲು ದೇಶಕ್ಕೆ ಹವಾಮಾನ ಹಣಕಾಸು ನಿರ್ಣಯವಾಗಿ ಉಳಿಯುತ್ತದೆ.

* ಕೃಷಿ ಮತ್ತು ಕೈಗಾರಿಕಾ ಉತ್ಪಾದನೆಗಳಲ್ಲಿನ ಬೆಳವಣಿಗೆಗಳಿಂದಾಗಿ ದೇಶದ ಆರ್ಥಿಕತೆಯು ಸದ್ಯ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರುವುದು ಕಂಡುಬಂದಿದೆ.

* ಸಣ್ಣ ಹಿಡುವಳಿ ಕೃಷಿ ತಂತ್ರಜ್ಞಾನಗಳ ಮೂಲಕ ಸಣ್ಣ, ಅತಿ ಸಣ್ಣ ರೈತರ ಉತ್ಪಾದಕತೆ ಸುಧಾರಿಸಲು ಸಮೀಕ್ಷೆ ಕರೆ ನೀಡಿದೆ.

* ಎಣ್ಣೆ ಕಾಳುಗಳು, ದ್ವಿದಳ ಧಾನ್ಯಗಳು ಮತ್ತು ತೋಟಗಾರಿಕೆ ಕಡೆಗೆ ಬೆಳೆ ವೈವಿಧ್ಯೀಕರಣಕ್ಕೆ ಆದ್ಯತೆ.

* ಆರ್ಥಿಕತೆಯ ಪುನರುಜ್ಜೀವನಕ್ಕೆ ಬೆಂಬಲ ಒದಗಿಸಲು ಹಣಕಾಸು ವ್ಯವಸ್ಥೆಯೊಂದಿಗೆ ಆಯ್ಕೆ
ಮಾಡಲು ಖಾಸಗಿ ವಲಯದ ಹೂಡಿಕೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೋರಿ ವಾಸನೆಗೆ ಇಲ್ಲಿದೆ ಉಪಾಯ