ಬೆಂಗಳೂರು: ಅಧಿಕಾರದ ದುರ್ಬಳಕೆ ಮಾಡಿಕೊಂಡು ತಮಗೆ ಅನುಕೂಲಕರವಾದ ವಾತಾವರಣ ನಿರ್ಮಿಸಿಕೊಳ್ಳುತ್ತಿದ್ದಾರೆಂದು ಆರೋಪಿಸಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಮುಖ್ಯ ಚುನಾವಣಾಧಿಕಾರಿ ಒ ಪಿ ರಾವತ್ ಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಚುನಾವಣೆ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಲು ಮೂರು ದಿನಗಳ ಕಾಲ ಬೆಂಗಳೂರಿನಲ್ಲಿರುವ ಒಪಿ ರಾವತ್ ರನ್ನು ರಾಜ್ಯ ಚುನಾವಣಾ ಆಯೋಗ ಕಚೇರಿಗೆ ಆಗಮಿಸಿ ಭೇಟಿ ಮಾಡಿದ ದೇವೇಗೌಡ ದೂರು ನೀಡಿದ್ದಾರೆ.
ನಿಗಮ ಮಂಡಳಿ ಅಧ್ಯಕ್ಷರಿಂದ ಅಧಿಕಾರ ಚಲಾವಣೆ ಮಾಡಿಸಲಾಗುತ್ತಿದೆ. ಅಧಿಕಾರಿಗಳನ್ನು ಮನಸ್ಸಿಗೆ ತೋಚಿದಂತೆ ವರ್ಗಾವಣೆ ಮಾಡಿಕೊಂಡು ಸಿಎಂ ತಮ್ಮ ತವರು ಜಿಲ್ಲೆಗೆ ತಮಗೆ ಅನುಕೂಲ ಮಾಡಿಕೊಡುವ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದಾರೆ. ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಮೂಲಕ ಅಧಿಕಾರ ಚಲಾವಣೆ ಮಾಡಲಾಗ್ತಿದೆ ಎಂದು ಸಿಎಂ ವಿರುದ್ಧ ದೇವೇಗೌಡರು ದೂರು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ