ಬಾರ್ ಗೆ ಬಂದಿದ್ದ ಗ್ರಾಹಕರ ಜತೆ ಲೈಂಗಿಕ ಸುಖ ನೀಡದ ಬಾರ್ ಡ್ಯಾನ್ಸರ್ ವೊಬ್ಬಳಿಗೆ ಥಳಿಸಲಾಗಿದೆ.
ಬಾರ್ ಡ್ಯಾನ್ಸರ್ ಳ ಬಟ್ಟೆ ಬಿಚ್ಚಿ ಥಳಿಸಿರುವ ಘಟನೆ ಹೈದರಾಬಾದ್ ಬೇಗಂಪೇಟ್ ನಲ್ಲಿ ನಡೆದಿದೆ. ಬೇಗಂಪೇಟ್ ನ ಪಬ್ ವೊಂದರಲ್ಲಿ ಬಾರ್ ಡ್ಯಾನ್ಸರ್ ಆಗಿ ಸಂತ್ರಸ್ತೆ ಕೆಲಸ ಮಾಡುತ್ತಿದ್ದಳು. ಆಗ ಬಾರ್ ಗೆ ಬರುವ ಗ್ರಾಹಕರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಮ್ಯಾನೇಜ್ ಮೆಂಟ್ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
ಮ್ಯಾನೇಜ್ ಮೆಂಟ್ ನೀಡಿದ ಕಿರುಕುಳ ವಿರೋಧಿಸಿ ಹಾಗೂ ಲೈಂಗಿಕ ಕ್ರಿಯೆ ನಡೆಸಲು ಒಪ್ಪದ ಕಾರಣಕ್ಕೆ ಆಕೆಯ ಸಹೋದ್ಯೋಗಿಗಳು ಆಕೆಯ ಬಟ್ಟೆ ಬಿಚ್ಚಿ ಥಳಿಸಿದ್ದಾರೆ.
ಘಟನೆ ಕುರಿತು ನಾಲ್ವರು ಆರೋಪಿಗಳನ್ನು ಬಂಧನ ಮಾಡಲಾಗಿದೆ.