Webdunia - Bharat's app for daily news and videos

Install App

ಗೂಗಲ್ ಸ್ಟ್ರೀಟ್ ವ್ಯೂ ಈಗ ಇಡೀ ಭಾರತದಲ್ಲಿ ಲಭ್ಯ

Webdunia
ಮಂಗಳವಾರ, 30 ಮೇ 2023 (08:34 IST)
ನವದೆಹಲಿ : ಗೂಗಲ್ ಮ್ಯಾಪ್ನ ಅತ್ಯಂತ ಉಪಯುಕ್ತವಾಗಿರೋ ಸ್ಟ್ರೀಟ್ ವ್ಯೂ ಫೀಚರ್ ಇದೀಗ ಇಡೀ ಭಾರತದಲ್ಲಿ ಲಭ್ಯವಾಗಿದೆ. ಈ ಫೀಚರ್ ಬಳಸಿ ಬಳಕೆದಾರರು ಕುಳಿತಲ್ಲೇ ತಮ್ಮ ನಗರ, ಹಳ್ಳಿ, ಶಾಲೆ, ಪಟ್ಟಣದ ಚಿತ್ರವನ್ನು 360 ಡಿಗ್ರಿ ಆಂಗಲ್ನಲ್ಲಿ ವೀಕ್ಷಿಸಬಹುದು.

2016ರಲ್ಲಿ ಭಾರತದಲ್ಲಿ ಪ್ರಾರಂಭವಾಗಬೇಕಿದ್ದ ಈ ಫೀಚರ್ ಭದ್ರತಾ ಕಾರಣಗಳಿಂದಾಗಿ ತಡವಾಗಿ ಕಳೆದ ವರ್ಷ ದೇಶಕ್ಕೆ ಲಗ್ಗೆಯಿಟ್ಟಿತು. ಆದರೆ ಆರಂಭದಲ್ಲಿ ಬೆಂಗಳೂರು ಸೇರಿದಂತೆ ಭಾರತದ 10 ನಗರಗಳಲ್ಲಿ ಮಾತ್ರವೇ ಈ ಫೀಚರ್ ಲಭ್ಯವಾಗಿತ್ತು.

ಇದೀಗ ಗೂಗಲ್ ಸ್ಟ್ರೀಟ್ ವ್ಯೂ ದೇಶದ ಬಹುತೇಕ ಮೂಲೆಗಳನ್ನು ಆವರಿಸಿಕೊಂಡಿದ್ದು, ಬಳಕೆದಾರರು ಪ್ರವಾಸವನ್ನು ಕೈಗೊಳ್ಳದೇ ತಾವು ಇಷ್ಟಪಡುವ ಪ್ರದೇಶವನ್ನು ಕುಳಿತಲ್ಲಿಯೇ 360 ಡಿಗ್ರಿ ಕೋನದಲ್ಲಿ ವೀಕ್ಷಿಸಲು ಅನುವು ಮಾಡಿಕೊಡುತ್ತಿದೆ.

ಏನಿದರ ಉಪಯೋಗ?

ನೀವು ಯಾವುದೇ ಒಂದು ಪ್ರದೇಶಕ್ಕೆ ಹೋಗಬಯಸಿದರೆ ಆ ಸ್ಥಳದ ಸ್ಥಿತಿಯ ಬಗ್ಗೆ ಮೊದಲೇ ತಿಳಿದುಕೊಳ್ಳಲು ಗೂಗಲ್ ಸ್ಟ್ರೀಟ್ ವ್ಯೂ ಸಹಾಯ ಮಾಡುತ್ತದೆ.

ಇದಕ್ಕಾಗಿ ನೀವು ಆ ಪ್ರದೇಶಕ್ಕೆ ತೆರಳಿ ಪರಿಶೀಲಿಸಬೇಕಾಗಿಲ್ಲ. ಬದಲಿಗೆ ಕುಳಿತಲ್ಲಿಯೇ ನೀವು ನೋಡ ಬಯಸುವ ಪ್ರದೇಶದ ಚಿತ್ರವನ್ನು ಅದು ತೋರಿಸುತ್ತದೆ. ಈ ರೀತಿ ನೀವು ಮೊದಲೇ ಸ್ಥಳ ಪರಿಶೀಲನೆ ಮಾಡಿ ಬಳಿಕ ಆ ಪ್ರದೇಶಕ್ಕೆ ಸುರಕ್ಷಿತವಾಗಿ ಪ್ರಯಾಣ ಬೆಳೆಸಬಹುದು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments