Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಎಲ್ಲ ರೈಲುಗಳ ಟಿಕೆಟ್ ದರಗಳನ್ನು ಕೋವಿಡ್–19 ಪಿಡುಗು ಕಾಣಿಸಿಕೊಳ್ಳುವುದಕ್ಕೂ ಮೊದಲು ಇದ್ದಂತೆಯೇ ನಿಗದಿ ಮಾಡಿ ಭಾರತೀಯ ರೈಲ್ವೆ ಆದೇಶ ಹೊರಡಿಸಿದೆ.
ಈ ದರಗಳು ತಕ್ಷಣದಿಂದ ಜಾರಿಗೆ ಬರಲಿವೆ ಎಂದು ರೈಲ್ವೆ ತಿಳಿಸಿದೆ. ಕೆಲವು ವರ್ಗಗಳ ವಿಶೇಷ ರೈಲುಗಳ ಟಿಕೆಟ್ಗೆ ಮಾಮೂಲಿ ದರಕ್ಕಿಂತ ಶೇಕಡಾ 30ರಷ್ಟು ಹೆಚ್ಚು ದರ ನಿಗದಿ ಮಾಡಲಾಗಿತ್ತು. ಟಿಕೆಟ್ ದರಗಳಲ್ಲಿನ ಈ ಬದಲಾವಣೆಗಳನ್ನು ತಕ್ಷಣ ಜಾರಿಗೊಳಿಸುವಂತೆ ರೈಲ್ವೆ ಸಚಿವಾಲಯ ಸೂಚನೆ ನೀಡಿದೆ. ಆದರೆ, ಸಾಫ್ಟ್ವೇರ್ನಲ್ಲಿ ಬದಲಾವಣೆ ಮಾಡುವುದು ಸೇರಿ ತಾಂತ್ರಿಕ ಕಾರಣಗಳಿಂದಾಗಿ ಅನುಷ್ಠಾನ ಕೆಲ ದಿನಗಳ ಕಾಲ ವಿಳಂಬವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.