Daily Horoscope

Select Your Language

Notifications

webdunia
webdunia
webdunia
webdunia

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಶಿಕ್ಷಣ ಇಲಾಖೆ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಇತ್ತೀಚಿನ ನಿರ್ಧಾರವು, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಸಂತೋಷಕ್ಕೆ ಕಾರಣವಾಗಿದೆ.

2022-23ರ ಶೈಕ್ಷಣಿಕ ವರ್ಷದಲ್ಲಿ ಎರಡನೇ ಬಾರಿಗೆ ಪೂರಕ ಪರೀಕ್ಷೆಯನ್ನು ನಡೆಸುವುದಾಗಿ ಮಂಡಳಿಯು ಪ್ರಕಟಿಸಿದೆ. ಹಿಂದಿನ ಅವಧಿಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದವರಿಗೆ ಈ ಕ್ರಮವು ಒಂದು ಉತ್ತಮ ಅವಕಾಶವಾಗಿದೆ.

ಎರಡನೇ ಬಾರಿ ಪೂರಕ ಪರೀಕ್ಷೆಯನ್ನು ನಡೆಸುವ ಪಿಯು ಮಂಡಳಿಯ ನಿರ್ಧಾರವು ಈಗಾಗಗಲೇ ಪೂರಕ ಪರೀಕ್ಷೆಯನ್ನು ಬರೆದ ಮತ್ತು ಹಿಂದಿನ ವಾರ್ಷಿಕ ಮತ್ತು ಪೂರಕ ಪರೀಕ್ಷೆಯಲ್ಲಿ  ಯಶಸ್ವಿಯಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಹೊಸ ಅವಕಾಶವು ಅವರಿಗೆ ಮತ್ತೆ ಪರೀಕ್ಷೆ ಬರೆಯಲು ಮತ್ತು ಅವರ ಅಂಕಗಳನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡುತ್ತದೆ.

ಮುಂಬರುವ ಎರಡನೇ ಪೂರಕ ಪರೀಕ್ಷೆಯು ಆಗಸ್ಟ್ 28 ರಿಂದ ಸೆಪ್ಟೆಂಬರ್ 2 ರವರೆಗೆ ನಡೆಯಲಿದೆ. ವರ್ಷದ ಹಿಂದಿನ ಸಾಮಾನ್ಯ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ತೇರ್ಗಡೆಯಾಗಲು ಈ ಪೂರಕ ಪರೀಕ್ಷೆಯಲ್ಲಿ ಭಾಗವಹಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಅಂಡಮಾನ್ ದ್ವೀಪಗಳಲ್ಲಿ 5.9 ತೀವ್ರತೆಯ ಭೂಕಂಪ!