Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗುಡ್ ನ್ಯೂಸ್? ಭಾರತದಲ್ಲಿ 5ಜಿ ನೆಟ್ವರ್ಕ್

ಗುಡ್ ನ್ಯೂಸ್? ಭಾರತದಲ್ಲಿ 5ಜಿ ನೆಟ್ವರ್ಕ್
ನವದೆಹಲಿ , ಬುಧವಾರ, 9 ಫೆಬ್ರವರಿ 2022 (06:37 IST)
ನವದೆಹಲಿ : ಭಾರತದಲ್ಲಿ 5ಜಿ ತಂತ್ರಜ್ಞಾನ ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ ಎಂದು ಸರ್ಕಾರ ತಿಳಿಸಿದೆ.
 
ಇದರ ಪ್ರಕಾರ ಭಾರತೀಯರು ಈ ವರ್ಷದ ಕೊನೆಯಲ್ಲಿ 5ಜಿ ನೆಟ್ವರ್ಕ್ ಬಳಸಬಹುದಾಗಿದೆ.

ಇಂಡಿಯಾ ಟೆಲಿಕಾಂ 2022 ಬಿಸಿನೆಸ್ ಎಕ್ಸ್ಪೋವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಚಿವ ಅಶ್ವಿನಿ ವೈಷ್ಣವ್ 5ಜಿ ತಂತ್ರಜ್ಞಾನ ಅಭಿವೃದ್ಧಿ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.

ಈ ವರ್ಷದ ಕೇಂದ್ರ ಬಜೆಟ್ ಅಧಿವೇಶನದಲ್ಲಿ ಟೆಲಿಕಾಂ ಆಪರೇಟರ್ಗಳಿಂದ 5ಜಿ ಸೇವೆಗಳನ್ನು ರೋಲ್ಔಟ್ ಮಾಡಲು ಅನುಕೂಲವಾಗುವಂತೆ ಮುಂದಿನ ಕೆಲ ತಿಂಗಳಿನಲ್ಲಿ ಅಗತ್ಯವಿರುವ ಸ್ಪೆಕ್ಟ್ರಮ್ಗಳನ್ನು ಹರಾಜುಗಳನ್ನು ನಡೆಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು. 

ಈ ವರ್ಷದ ಆಗಸ್ಟ್ನಲ್ಲಿ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ನಡೆಯಲಿದೆ. ಅದರ ಬಳಿಕ 5ಜಿ ಸೇವೆ ಲಭ್ಯವಾಗಲಿದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಎಲಿಜಬೆತ್ ಕೊಹಿನೂರು ಯಾರ ಪಾಲು?