Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶಾಲೆಯಲ್ಲಿ 5ನೇ ತರಗತಿ ಮೇಲ್ಪಟ್ಟವರಿಗೆ ಉಚಿತವಾಗಿ ಕಾಂಡೋಮ್ ಸಿಗುವಂತೆ ವ್ಯವಸ್ಥೆ!

ಶಾಲೆಯಲ್ಲಿ 5ನೇ ತರಗತಿ ಮೇಲ್ಪಟ್ಟವರಿಗೆ ಉಚಿತವಾಗಿ ಕಾಂಡೋಮ್ ಸಿಗುವಂತೆ ವ್ಯವಸ್ಥೆ!
ಚಿಕಾಗೋ , ಭಾನುವಾರ, 11 ಜುಲೈ 2021 (08:39 IST)
ಚಿಕಾಗೋ : ಸುರಕ್ಷಿತ ಲೈಂಗಿಕತೆಗೆ, ಬೇಡದ ಗರ್ಭಕ್ಕಾಗಿ ಕಾಂಡೋಮ್ ಬಳಸುವುದು ಅತ್ಯಂತ ಅವಶ್ಯಕವಾಗಿದೆ. ಇಂದಿನ ಪೀಳಿಗೆ ಬೇಗನೇ ಲೈಂಗಿಕತೆಗೆ ತೆರೆದುಕೊಳ್ಳುತ್ತಿದ್ದು ಲೈಂಗಿಕ ಶಿಕ್ಷಣದ ಅಗತ್ಯತೆ ಹೆಚ್ಚಾಗಿದೆ.
 
ಹದಿಹರೆಯದ ಕೂತುಹಲ, ತಪ್ಪು ಮಾಹಿತಿಗಳಿಂದ ಬೇಡದ ಗರ್ಭ ಸೇರಿದಂತೆ ಹಲವು ಸಮಸ್ಯೆಗಳಿಗೆ ಯುವಕ-ಯುವತಿಯರು ಸಿಲುಕುತ್ತಿದ್ದಾರೆ.
ಇನ್ನು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಕ್ಕಳು ಬೇಗನೇ ತಮ್ಮ ಸೆಕ್ಸ್ ಜೀವನವನ್ನು ಶುರು ಮಾಡುತ್ತಿದ್ದಾರೆ.
 ಬಾಲ್ಯದಲ್ಲೇ ಪೋಷಕರು ಆಗುತ್ತಿರುವುದು ಒಂದಾದರೆ ಸೆಕ್ಸ್ನಿಂದ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
 ಇದನ್ನು ತಡೆಯುವ ನಿಟ್ಟಿನಲ್ಲಿ ಅಮರಿಕಾದ ಚಿಕಾಗೋ ರಾಜ್ಯ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
 ಚಿಕಾಗೋ ರಾಜ್ಯಾದ್ಯಂತ ಶಾಲೆಗಳಲ್ಲಿ 5ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಾಂಡೋಮ್ಗಳು ಸಿಗುವಂತೆ ವ್ಯವಸ್ಥೆ ಮಾಡಿ ಎಂದು ಆದೇಶ ಹೊರಡಿಸಲಾಗಿದೆ.
webdunia

ಚಿಕಾಗೋ ಆರೋಗ್ಯ ಇಲಾಖೆ ಉಚಿತವಾಗಿ ಟನ್ಗಟ್ಟಲೇ ಕಾಂಡೋಮ್ಗಳನ್ನು ಶಾಲೆಗಳಿಗೆ ಸರಬರಾಜು ಮಾಡುತ್ತಿದೆ.
5ನೇ ತರಗತಿ ಮೇಲ್ಪಟ್ಟ ಮಕ್ಕಳು ಸೆಕ್ಸ್ ಮಾಡಬಹುದು ಎಂಬುವದನ್ನು ಪರೋಕ್ಷವಾಗಿ ಚಿಕಾಗೋ ಸರ್ಕಾರ ಒಪ್ಪಿಕೊಂಡಂತೆ ಕಾಣುತ್ತಿದೆ.
ಕಾಯಿಲೆಗಳ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಉಚಿತವಾಗಿ ಶಾಲಾ ಮಕ್ಕಳಿಗೆ ಕಾಂಡೋಮ್ ಗಳನ್ನು ನೀಡಲಾಗುತ್ತಿದೆ ಎಂದು ಅಲ್ಲಿನ ಆಡಳಿತ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
ಸುರಕ್ಷಿತ ಸೆಕ್ಸ್ಗೆ ಕಾಂಡೋಮ್ ಬಳಸುವುದು ಪ್ರಜ್ಞಾವಂತರ ಲಕ್ಷಣ ಎಂಬುವುದನ್ನು ಎಂದಿಗೂ ಮರೆಯಬೇಡಿ.
 ಸುರಕ್ಷಿತ ಸೆಕ್ಸ್ಗೆ ಕಾಂಡೋಮ್ ಬಳಸುವುದು ಪ್ರಜ್ಞಾವಂತರ ಲಕ್ಷಣ ಎಂಬುವುದನ್ನು ಎಂದಿಗೂ ಮರೆಯಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಂಪಿಯಲ್ಲಿ ಜನ ಜಂಗುಳಿ!