ಕೊರೊನಾ, ಲಾಕ್ಡೌನ್ನಿಂದ ಮಕ್ಕಳು ಶಾಲೆ ಕಡೆ ಮುಖ ಮಾಡಿ ವರ್ಷಗಳೇ ಕಳೆಯುತ್ತಿದೆ. ಎಷ್ಟೋ ಮಕ್ಕಳು ತಮ್ಮ ಹೆಸರನ್ನು ಬರೆಯುವುದನ್ನೂ ಮರೆತ್ತಿದ್ದಾರಂತೆ. ಮಕ್ಕಳು ಮೊದಲಿನ ಸ್ಥಿತಿಗೆ ಮರಳಲು 3 ವರ್ಷಗಳೇ ಬೇಕಾಗುತ್ತದೆ ಎನ್ನುತ್ತಿದೆ ಸಂಶೋಧನೆ.ಕೊರೊನಾ ಕಾರಣದಿಂದ ಉಂಟಾದ ಕಲಿಕೆಯ ನಷ್ಟವು 40 ರಿಂದ 60 ಶೇಕಡಾದ ಮಧ್ಯೆ ಇದೆ ಎಂದು ವಿದ್ಯಾರ್ಥಿಗಳು ಭಾವಿಸಿದರೆ, ಆ ನಷ್ಟ 30 ರಿಂದ 40 ಶೇಕಡಾ ಇದೆ ಎಂದು ವಿಶ್ವ ವಿದ್ಯಾನಿಲಯಗಳು ಹೇಳಿವೆ. ಕೊರೊನಾ ವಿಶ್ವದ ಜನರ ಪಾಲಿಗೆ ಹೊತ್ತು ತಂದ ಸಂಕಷ್ಟಗಳು ಹಲವು. ಅದರಿಂದ ಬಹಳಷ್ಟು ಮಂದಿ ಪ್ರಾಣ ಕಳೆದುಕೊಂಡರು, ಪ್ರಾಣ ಕಳೆದುಕೊಳ್ಳುತ್ತಲೇ ಇದ್ದಾರೆ. ಆದರೆ ಬದುಕಿದ್ದೂ ಭವಿಷ್ಯದ ಕನಸುಗಳಿಗೆ ಕೊಡಲಿ ಏಟು ಬೀಳಿಸಿಕೊಂಡು ನರಳುತ್ತಿರುವವರ ಸಂಖ್ಯೆಯೂ ಕಡಿಮೆ ಇಲ್ಲ.
ಕೋವಿಡ್ ಸಾಂಕ್ರಮಿಕದ ದೆಸೆಯಿಂದ ದೊಡ್ಡವರ ಪರಿಸ್ಥಿತಿ ಒಂದು ರೀತಿಯದ್ದಾದರೆ, ಮುಂದಿನ ಭವಿಷ್ಯ ಕಟ್ಟಿಕೊಳ್ಳುವ ಕನಸು ಹೊತ್ತು ಓದುವ ವಿದ್ಯಾರ್ಥಿಗಳ ಪರಿಸ್ಥಿತಿ ಇನ್ನೊಂದು ತರಹ.