ಇಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ದೀಪ ಹಚ್ಚುವುದರ ಜೊತೆಗೆ ಪಟಾಕಿ ಹೊಡೆಯುವುದೂ ಸಹ ಹಬ್ಬದ ಒಂದು ಭಾಗವಾಗಿಬಿಟ್ಟಿದೆ.ಆದರೆ ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ಹಲವು ರಾಜ್ಯಗಳು ಪಟಾಕಿಯನ್ನು ನಿಷೇಧಿಸಿವೆ. ಹೀಗಾಗಿ ದೇಶಾದ್ಯಂತ ಹಲವು ರಾಜ್ಯಗಳು ಪಟಾಕಿ ಮಾರಾಟ ಹಾಗೂ ಹೊಡೆಯುವುದನ್ನು ನಿಷೇಧ ಮಾಡಿವೆ. ಕೆಲವು ರಾಜ್ಯಗಳು ಹಸಿರು ಪಟಾಕಿ ಮಾರಾಟ ಮಾಡುವಂತೆ, ಹೊಡೆಯವಂತೆ ಗ್ರಾಹಕರಿಗೆ ಆದೇಶ ನೀಡಿವೆ. ಪರಿಸರ ಸ್ನೇಹಿಯಾದ ಹಸಿರು ಪಟಾಕಿ ವಾಯು ಮಾಲಿನ್ಯ ಉಂಟು ಮಾಡುವುದಿಲ್ಲ.