ಹೊರಬಿತ್ತು ಸ್ಫೋಟಕ ಆಡಿಯೋ ! ಏನಿದು?

Webdunia
ಭಾನುವಾರ, 24 ಏಪ್ರಿಲ್ 2022 (09:02 IST)
ಕಲಬುರಗಿ : 545 ಪಿಎಸ್ಐ ಹುದ್ದೆಗಳ ನೋಟಿಫಿಕೇಶನ್ ಮುಗಿದಿದೆ.
 
402ರಲ್ಲಿ ಮಾಡೋಣ ಎಂಬ ಮಾತುಗಳ ಜೊತೆಗೆ ಪರೀಕ್ಷಾ ಕೇಂದ್ರವನ್ನೇ ಮೊದಲು ಬುಕ್ ಮಾಡಲು ಅರ್ಜಿ ಸಂಖ್ಯೆಯನ್ನು ಬೇಗನೇ ಕಳುಹಿಸಿ ಎಂಬ ಹಲವಾರು ಸಂಭಾಷಣೆಗಳನ್ನು ಹೊಂದಿರುವ ಸ್ಫೋಟಕ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಅವರು, ಪಿಎಸ್ಐ ನೇಮಕಾತಿಯ ಸಂಬಂಧ ಇಬ್ಬರು ಆರೋಪಿಗಳ ಸಂಭಾಷಣೆಯಿದೆ.

ಇದರಲ್ಲಿ ಓರ್ವ ವ್ಯಕ್ತಿ ಪಿಎಸ್ಐ ಆಗಿ ಆಯ್ಕೆಯಾಗಿದ್ದಾನೆ. ಇನ್ನೋರ್ವ ವ್ಯಕ್ತಿ ಮಧ್ಯವರ್ತಿಯಾಗಿದ್ದಾನೆ. ಈ ಪ್ರಕರಣದಲ್ಲಿ ಮೇಲಿಂದ ಕೆಳಗಿನವರೆಗೂ ಭ್ರಷ್ಟಾಚಾರ ನಡೆದಿದೆ ಎಂದು ಕಿಡಿಕಾರಿದ್ದಾರೆ.

ಈ ಆಡಿಯೋ ಮೂಲಕ ತಿಳಿಯುವುದೆನೆಂದರೆ, ಈ 545ರ ಅಕ್ರಮ ಜೊತೆ, ಜೊತೆಗೆ ಮುಂದಿನ 402 ಪೋಸ್ಟ್ಗಳನ್ನು ಸಹ ಬುಕ್ ಮಾಡಲಾಗಿದೆ. ಈ ಸಂಬಂಧ 371 ಜೆ ಸರಿಯಾಗಿ ಜಾರಿ ಆಗಿಲ್ಲ ಅಕ್ರಮ ನಡೆದಿದೆ ಎಂದು ಹೈದರಾಬಾದ್ ಕರ್ನಾಟಕದ ಅಭ್ಯರ್ಥಿಗಳು ಕೋರ್ಟ್ಗೆ ಹೋಗಿದ್ದಾರೆ.

ಆದರೂ ಏನು ಆಗಲ್ಲ ಅಂತ ಆಯ್ಕೆಯಾದ ಪಿಎಸ್ಐ ಹೇಳುತ್ತಾನೆ. ಈ ಸರ್ಕಾರದಲ್ಲಿ ನಮ್ಮ ಭಾಗದವರ ಪರಿಸ್ಥಿತಿ ನೋಡಿ. ಈ ಪ್ರಕರಣದಲ್ಲಿ ಸರ್ಕಾರ, ಪರೀಕ್ಷಾ ಕೇಂದ್ರ, ಸಿಬ್ಬಂದಿ ಎಲ್ಲರೂ ಶಾಮಿಲಾಗಿದ್ದಾರೆ. ಅಭ್ಯರ್ಥಿಯ ಎಕ್ಸಾಂ ಸೆಂಟರ್ ಬುಕ್ ಮಾಡುವುದರಿಂದ ಹಿಡಿದು ಎಲ್ಲಾ ಕೂಡ ನೇಮಕಾತಿ ಪರೀಕ್ಷೆಯಲ್ಲಿ ಬುಕ್ ಆಗುತ್ತವೆ ಎಂದು ತಿಳಿಸಿದ್ದಾರೆ.

57 ಸಾವಿರ ಯುವಕರ ನೌಕರಿಯ ಭವಿಷ್ಯವಿದೆ. ತನಿಖಾಧಿಕಾರಿ ಚೇಂಜ್ ಮಾಡುವುದು ಸರಿಯಲ್ಲ. ಈ ಪರೀಕ್ಷೆಯಲ್ಲಿ ಸಾಕಷ್ಟು ಜನ ಅಕ್ರಮದಿಂದ ನೇಮಕವಾಗಿದ್ದಾರೆ. ಹೀಗಾಗಿ ಈ ಪರೀಕ್ಷೆ ಬಗ್ಗೆ ಸರ್ಕಾರ ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು.

ಈ ಆಡಿಯೋದಲ್ಲಿರುವ ಓರ್ವ ವ್ಯಕ್ತಿ ಯಾರು ಅಂತ ನನಗೆ ಗೊತ್ತಿದೆ. ನನಗೆ ಸಿಕ್ಕ ಆಡಿಯೋ ಪೊಲೀಸರಿಗೆ ಸಿಗಲ್ವಾ ಎಂದು ಪ್ರಶ್ನಿಸಿದ್ದಾರೆ.

ಈ ಆಡಿಯೋದಲ್ಲಿ ಆಯ್ಕೆಯಾದವರು ನಾನು ಎಚ್.ಕೆ ಭಾಗದವರು ಸಿಂದಗಿಯಲ್ಲಿ ಇದ್ದಿನಿ ಅಂತ ಹೇಳಿದ್ದಾರೆ. ಅಕ್ರಮದಲ್ಲಿ ಭಾಗಿಯಾದ ಮಹಾಂತೇಷ್ ಪಾಟೀಲ್ 2019ರಲ್ಲಿ ರಾಜೀನಾಮೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಧ್ಯರಾತ್ರಿ, ಭಾರಿ ಮಳೆಯಲ್ಲಿ ಟಿಕೆಟ್ ಇಲ್ಲ ಎಂದು ಯವತಿಯನ್ನು ರೈಲಿನಿಂದ ಹೊರಹಾಕಿದ ಟಿಟಿಇ: ಇದು ಸರೀನಾ Video

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ ಕೆಲಸಕ್ಕೆ ಶಾಕ್ Video

ನಮಗೆ ಹೇಳ್ತೀರಿ.. ನೀವೂ ಫೈನ್ ಕಟ್ಟಿ: ಹೆಲ್ಮೆಟ್ ಧರಿಸದೇ ಬಂದ ಪೊಲೀಸಪ್ಪ ಸರಿಯಾಗಿ ತಗ್ಲಾಕೊಂಡ್ರು Video

ನಾಗರಹೊಳೆ ಪ್ರದೇಶದಲ್ಲಿ ರಸ್ತೆ ಬದಿ ಕಂಡುಬಂದ ಆನೆಗೆ ಯುವಕರಿಂದ ಇದೆಂಥಾ ಕಿರುಕುಳ Video

ಅಖಿಲೇಶ್ ಯಾದವ್ ಮಗಳ ಸಹಾಯಕ್ಕೆ ಬಂದ ಯೋಗಿ ಆದಿತ್ಯನಾಥ್: ರಾಜಕೀಯ ಏನೇ ಇರಲಿ, ಅವಳೂ ಮಗಳು ಎಂದ ಯೋಗಿಗೆ ಭಾರೀ ಮೆಚ್ಚುಗೆ

ಮುಂದಿನ ಸುದ್ದಿ
Show comments