Publish Date: Tue, 14 Dec 2021 (08:57 IST)
Updated Date: Tue, 14 Dec 2021 (00:59 IST)
ಬೆಂಗಳೂರು : ನಗರದ ಹಲವಾರು ಪ್ರದೇಶಗಳಲ್ಲಿ ಇಂದಿನಿಂದ ಬುಧವಾರದವರೆಗೆ ವಿದ್ಯುತ್ ಕಡಿತ ಸಮಸ್ಯೆ ಎದುರಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ತಿಳಿಸಿದೆ.
ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೋರೇಶನ್ ಲಿಮಿಟೆಡ್ (ಕೆಪಿಟಿಸಿಎಲ್) ನಿರ್ವಹಣೆ ಮತ್ತು ಇತರ ಕೆಲಸಗಳಿಂದಾಗಿ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳಿಸಬೇಕಾಗುತ್ತದೆ.
ಬೆಂಗಳೂರು ದಕ್ಷಿಣ ವಲಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಪದ್ಮನಾಭನಗರ ಜೆಪಿ ನಗರ 5 ನೇ ಹಂತ, ವೆಂಕಟಾದ್ರಿ ಲೇಔಟ್, ವಸಂತ ವಲ್ಲಬ ನಗರ, ಶಾರದ ನಗರ, ಮಾರುತಿ ಲೇಔಟ್, ಬಿಕಿಸಿಪುರ, ಮಾವಿನ ತೋಟ, ಬಿಕಿಸಿಪುರ, ಮಾವಿನ ತೋಟ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿನಗರ ಕೆರೆ, ಇಸ್ರೋ ಲೇಔಟ್, ಬ್ಯಾಂಕ್ ಆಫ್ ಬರೋಡಾ ಕಾಲೋನಿ, ಡಬ್ಲ್ಯೂ.
ಗಾರ್ಡನ್ ಸೊಸೈಟಿ, ಚುಂಚಗಟ್ಟಾ ಗ್ರಾಮ, ಸುಪ್ರಜಾ ನಗರ, ಗಣಪತಿಪುರ, ಓಲ್ಡ್ ಬ್ಯಾಂಕ್ ಕಾಲೋನಿ, ಟೀಚರ್ಸ್ ಕಾಲೋನಿ, ಬೀರೇಶ್ವರ ನಗರ, ಕೋಣನಕುಂಟೆ ಕೈಗಾರಿಕಾ ಪ್ರದೇಶ, ಚುಂಚಗಟ್ಟಾ ಮುಖ್ಯರಸ್ತೆ, ಸಿಆರ್ ಲೇಔಟ್, ಎಲ್ಐಸಿ ಕಾಲೋನಿ, ಜೆಪಿ ನಗರ 1 ನೇ ಹಂತ, ಭವಾನಿ ನಗರ, ಬನಶಂಕರಿ 2ನೇ ಹಂತ, ಕದರ್ರನಹಳ್ಳಿ ನಗರ ಮುಖ್ಯರಸ್ತೆ, ಕೆಆರ್ ರಸ್ತೆ, ಬನಗಿರಿ ನಗರ, ಕಿಡ್ನಿ ಫೌಂಡೇಶನ್ ಮುಖ್ಯರಸ್ತೆ, ವೆಂಕಟಾದ್ರಿ ಲೇಔಟ್, ವಿವೇಕನಗರ, ಈಜಿಪುರ, ಜೋಗಿ ಕಾಲೋನಿ, ವಿನಾಯಕ ನಗರ, ಬಾಲಾಜಿ ಲೇಔಟ್, ಎಇಸಿಎಸ್ ಲೇಔಟ್, ಐಟಿಪಿಎಲ್ ಮುಖ್ಯರಸ್ತೆ, ದೇವರಬಿಸನಹಳ್ಳಿ, ಮತ್ತು ನಾರಾಯಣ ನಗರದಲ್ಲಿ ವಿದ್ಯುತ್ ಕಡಿತಗೊಳ್ಳಿದೆ.