ಮಡಿಕೇರಿ : ಕೊಡಗಿನಲ್ಲಿ ಪದೇ ಪದೇ ಭೂಮಿ ಕಂಪಿಸುತ್ತಿರುವುದು ಬೆಳಕಿಗೆ ಬಂದಿದೆ. ಕೊಡಗಿನ ಗಡಿಯಲ್ಲಿ ಗುರುವಾರ ಮಧ್ಯರಾತ್ರಿ ಮತ್ತೆ 2 ಬಾರಿ ಭೂಮಿ ಕಂಪಿಸಿದೆ.
ಕಳೆದ ರಾತ್ರಿ 1 ಗಂಟೆಯಿಂದ 1.40 ಗಂಟೆ ಅವಧಿಯಲ್ಲಿ ಸಂಪಾಜೆ, ಪೆರಾಜೆ, ಗೂನಡ್ಕ, ಕರಿಕೆ ವ್ಯಾಪ್ತಿಯಲ್ಲಿ ಎರಡು ಬಾರಿ ಭೂಕಂಪನವಾಗಿದೆ. ಗ್ರಾಮದಲ್ಲಿ ದೊಡ್ಡ ಶಬ್ದ ಎರಡು ಬಾರಿಯೂ ಕೇಳಿ ಬಂದಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ.
ಗುರುವಾರ ಸಂಪಾಜೆಯಲ್ಲಿ ರಿಕ್ಟರ್ ಮಾಪನ ಅಳವಡಿಸಲಾಗಿದ್ದು ಭೂಕಂಪನದ ಪ್ರಮಾಣ ಸ್ಪಷ್ಟವಾಗಿ ಇನ್ನಷ್ಟೇ ತಿಳಿಯಬೇಕಾಗಿದೆ. ಇತ್ತ ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗ್ತಿದೆ. ವರುಣಾರ್ಭಕ್ಕೆ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆ ತತ್ತರಿಸಿ ಹೋಗಿದೆ.