Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಡಬಲ್ ಡಿಗ್ರಿ : ಪಿಎಚ್‌ಡಿ ಕಡ್ಡಾಯವಲ್ಲ!

ಡಬಲ್ ಡಿಗ್ರಿ : ಪಿಎಚ್‌ಡಿ ಕಡ್ಡಾಯವಲ್ಲ!
ನವದೆಹಲಿ , ಬುಧವಾರ, 13 ಏಪ್ರಿಲ್ 2022 (11:57 IST)
ಭಾರತದ ಅನೇಕ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಬೋಧನೆಗೆ ಪಿಎಚ್ಡಿ ಕಡ್ಡಾಯ ಎನ್ನಲಾಗಿತ್ತು.
 
ಆದರೆ ಇದೀಗ ವಿಶ್ವವಿದ್ಯಾಲಯ ಅನುದಾನ ಆಯೋಗವು ತನ್ನ ಮಹತ್ತರ ನಿರ್ಧಾರವನ್ನು ಪ್ರಕಟಿಸಿದ್ದು,

ವಿಶ್ವವಿದ್ಯಾನಿಲಯಗಳಲ್ಲಿ ಬೋಧಕರಾಗಿ ಹೆಚ್ಚಿನ ಉದ್ಯಮ ತಜ್ಞರನ್ನು ಹೊಂದಲು ಈ ಹಿಂದೆ ಕಡ್ಡಾಯ ಗೊಳಿಸಿದ್ದ ಪಿಹೆಚ್ಡಿ ಅಗತ್ಯತೆಯನ್ನು ತೆಗೆದುಹಾಕಲು ನಿರ್ಧರಿಸಿತ್ತು.

ಇದು ದೇಶದ ಶಿಕ್ಷಣ  ವ್ಯವಸ್ಥೆಯಲ್ಲಿ ಹೊಸ ನಾಂದಿಗೆ ಕಾರಣವಾಗಲಿದೆ ಎನ್ನಲಾಗಿದೆ. ಮಾತ್ರವಲ್ಲ ಆಯಾಯ ಕ್ಷೇತ್ರಗಳ ಪರಿಣಿತರು, ಉದ್ಯಮದ ತಜ್ಞರು ಮತ್ತು ವೃತ್ತಿಪರರನ್ನು ಶಿಕ್ಷಣ ಕ್ಷೇತ್ರದತ್ತ ಸಳೆಯುವ ನಿಟಗ್ಟಿನಲ್ಲಿ ಯುಜಿಸಿ ಈ ನಿರ್ಧಾರ ಕೈಗೊಂಡಿದೆ ಎಂದು ಅಂದಾಜಿಸಲಾಗಿದೆ.

 ಯುಜಿಸಿ, ವಿಶೇಷ ಹುದ್ದೆಗಳನ್ನು ರಚಿಸಲು  ಯೋಜನೆ ಹಾಕಿಕೊಂಡಿದೆ. ಈ ಹೊಸ ಹುದ್ದೆಗಳು ಪ್ರಾಕ್ಟೀಸ್ ಪ್ರಾಧ್ಯಾಪಕ  ಮತ್ತು ಪ್ರಾಕ್ಟೀಸ್ ಸಹ ಪ್ರಾಧ್ಯಾಪಕ   ಆಗಿರಲಿದೆ ಈ ಮೂಲಕ ಪಿಎಚ್ಡಿ  ಇಲ್ಲದವರಿಗೂ ಶಿಕ್ಷಣ ಕ್ಷೇತ್ರದಲ್ಲಿ ಬೋಧನೆಗೆ ಅವಕಾಶ ಮಾಡಿಕೊಡಲಾಗುತ್ತದೆ .


Share this Story:

Follow Webdunia kannada

ಮುಂದಿನ ಸುದ್ದಿ

ಏಕ ಕಾಲಕ್ಕೆ ಡಬಲ್ ಡಿಗ್ರಿ ಪಡೆಯಬಹದು!