Publish Date: Tue, 28 Jun 2022 (11:46 IST)
Updated Date: Mon, 27 Jun 2022 (23:46 IST)
ಬೆಂಗಳೂರು : ಕಬ್ಬನ್ ಪಾರ್ಕ್ನಲ್ಲಿ ಈಗ ನಾಯಿಗಳಿಗಾಗಿ ಬಿಗ್ ಫೈಟ್ ನಡೆಯುತ್ತಿದೆ. ತೋಟಗಾರಿಕಾ ಇಲಾಖೆಯ ವಿರುದ್ಧ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಿಂದ ಹಿಡಿದು ಶ್ವಾನ ಪ್ರೇಮಿಗಳು ಕೂಡ ಕಿಡಿಕಾರುತ್ತಿದ್ದಾರೆ.
ಮುಂಜಾವಿನಲ್ಲಿ ಇಳಿಸಂಜೆಯಲ್ಲಿ ಪಾರ್ಕ್ಗೆ ವಾಕಿಂಗ್ ಹೋಗೋರು ಜೊತೆಗೆ ಸಾಕು ನಾಯಿಯನ್ನು ಕರೆದುಕೊಂಡು ಹೋಗ್ತಾರೆ. ಅದ್ರಲ್ಲೂ ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಂತೂ ಬೌ ಬೌ ಗಳದ್ದೇ ದರ್ಬಾರ್.
ಕಬ್ಬನ್ ಪಾರ್ಕ್ನ ಒಂದು ಭಾಗ ಸಂಪೂರ್ಣ ನಾಯಿಗಳಿಗೆ ಮೀಸಲಿಡಲಾಗಿದೆ. ಕಬ್ಬನ್ ಪಾರ್ಕ್ಗೆ ಹೈಬ್ರೀಡ್ ನಾಯಿಗಳ ಜೊತೆ ಔಟಿಂಗ್ ರೀತಿಯಲ್ಲಿ ಜನ ಬರ್ತಾರೆ. ಆದರೆ ಈ ನಾಯಿಗಳು ಪಾರ್ಕ್ನ ಫುಟ್ ಪಾತ್, ಸ್ಥಳವನ್ನು ಗಲೀಜು ಮಾಡುತ್ತೆ.
ಕೆಲವರು ಕ್ಲೀನ್ ಮಾಡಲ್ಲ ಅಂತಾ ಈಗ ತೋಟಗಾರಿಕ ಇಲಾಖೆ ಬೌ ಬೌ ಹಾವಳಿ ಬ್ರೇಕ್ಗೆ ನೋ ಎಂಟ್ರಿ ಅಸ್ತ್ರವನ್ನು ಪ್ರಯೋಗಿಸಲು ಪ್ರಸ್ತಾವನೆ ಸಿದ್ಧಮಾಡಿದೆ. ಜುಲೈ-1 ರಿಂದ ಕಬ್ಬನ್ ಪಾರ್ಕ್ಗೆ ನಾಯಿಗಳಿಗೆ ಸಂಪೂರ್ಣ ನಿಷೇಧ ಹೇರಲು ತಯಾರು ಮಾಡಿದೆ.
Ramya kosira
Publish Date: Tue, 28 Jun 2022 (11:46 IST)
Updated Date: Mon, 27 Jun 2022 (23:46 IST)