ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಇದೀಗ ರಾಕಿಂಗ್ ಸ್ಟಾರ್ ಯಶ್ ಅವರು ಮತದಾರರಿಗೆ ಸಲಹೆಯೊಂದನ್ನು ನೀಡಿದ್ದಾರೆ.
ಪತ್ರಕೆಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ಮಾತನಾಡಿದ ಅವರು, ‘ರಾಜಕಾರಣಿಗಳು ಚುನಾವಣಾ ಪ್ರಚಾರ ಅಂದ್ರೆ ಬರೀ ಕೋಟಿ ಕೋಟಿ ಹಣ ಖರ್ಚು ಮಾಡಿ, ದೊಡ್ಡ ದೊಡ್ಡ ಸಮಾವೇಷ ಮಾಡುವುದು ಅಷ್ಟೆ ಎಂದುಕೊಂಡಿದ್ದಾರೆ. ಒಬ್ಬ ಅಭ್ಯರ್ಥಿಗೆ ತಾನು ಸ್ಫರ್ಧಿಸುವ ಕ್ಷೇತ್ರಕ್ಕೆ ಏನು ಬೇಕು. ತಾನೂ ಏನು ಕೆಲಸ ಮಾಡಬೇಕು ಅನ್ನೋದೆ ಗೊತ್ತಿರುವುದಿಲ್ಲ. ಇಂಥವರನ್ನ ಜನ ತಿರಸ್ಕರಿಸಬೇಕು. ಮತದಾನ ಅನ್ನೋ ಪವರ್ ಕಾರ್ಯವನ್ನು ಜನಸಾಮಾನ್ಯರು ಸಮರ್ಥ ವ್ಯಕ್ತಿಗೆ ಸಲ್ಲಿಸಬೇಕು. ಆಗಲೇ ಉತ್ತಮ ನಗರ, ಅತ್ಯುತ್ತಮ ನಾಡು, ಅದ್ಭುತ ದೇಶ ಕಟ್ಟಲು ಸಾಧ್ಯ’ ಎಂದಿದ್ದಾರೆ.
ಹಾಗೇ ‘ಎಲೆಕ್ಷನ್‍ನಲ್ಲಿ ಗೆಲ್ಲಿಸಿದ ಪ್ರತಿನಿಧಿಯನ್ನು ಸುಮ್ನೆ ಬಿಟ್ಟು ಬಿಡುವುದಲ್ಲ. ಪ್ರತಿವಾರ, ಪ್ರತಿತಿಂಗಳು ಟಾರ್ಗೆಟ್ ಕೊಡಬೇಕು. ಆಯಾ ಕಾಲದಲ್ಲಿ ಆಗಬೇಕಾದ ಕೆಲಸ ಆಗಿಲ್ಲವೆಂದರೆ ಆ ಕ್ಷೇತ್ರದ ಹಿರಿಯರು, ಪ್ರಜ್ಞಾವಂತರು ಸಂಘಟನೆ ಮಾಡಿಕೊಂಡು ಪ್ರತಿನಿಧಿಯನ್ನ ಹಾಕ್ಕೊಂಡು ರುಬ್ಬಬೇಕು’ ಎಂದು ಯಶ್ ಅವರು ಮತದಾರರಿಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ