ಬೆಂಗಳೂರು : ರಾಜ್ಯದ ಪಠ್ಯದಲ್ಲೂ ಭಗವದ್ಗೀತೆ ಸೇರ್ಪಡೆ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿ ನಿರ್ಧಾರಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಹೇಳಿದ್ದಾರೆ.
ಮೈಸೂರು ಮಹಾರಾಜರ ಮತ್ತು ಕರ್ನಾಟಕದ ಇತಿಹಾಸದ ಕುರಿತಂತೆ ಒಂದಷ್ಟು ಮಾಹಿತಿಗಳನ್ನು ಪಠ್ಯಕ್ರಮದಲ್ಲಿ ಸೇರಿಸಲಾಗಿದೆ. ಎಲ್ಲಾ ಪೋಷಕರು ನಮ್ಮ ಮಕ್ಕಳು ಜ್ಞಾನ ಸಂಪಾದನೆ ಮಾಡುತ್ತಿದ್ದಾರೆ.
ಜ್ಞಾನಶೀಲರಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹಿಂದೆ ಹಳ್ಳಿಗಳಲ್ಲಿ ರಾಮಾಯಣ, ಮಹಾಭಾರತ ನಾಟಕಗಳು ನಡೆಯುತ್ತಿದ್ದೇವು. ಹಾಗಾಗಿ ಎಲ್ಲರಲ್ಲಿಯೂ ಸಂಸ್ಕಾರ ಬೆಳೆಯುತ್ತಿತ್ತು. ಆದರೀಗ ಇದರ ಕೊರತೆ ಇದೆ ಎಂದಿದ್ದಾರೆ.
ಇದೇ ವೇಳೆ ಗುಜರಾತ್ ಮಾದರಿಯಲ್ಲಿ ರಾಜ್ಯದ ಪಠ್ಯದಲ್ಲೂ ಭಗವದ್ಗೀತೆ ಸೇರ್ಪಡೆ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ. ಗುಜರಾತ್ ಸರ್ಕಾರದ ನಿರ್ಧಾರ ಉತ್ತಮವಾಗಿ ಇದೆ. ಮಕ್ಕಳಿಗೆ ಮಾರಲ್ ಸೈನ್ಸ್ ವಿಷಯಗಳು ಇವತ್ತು ಬೋಧನೆ ಆಗುತ್ತಿಲ್ಲ.
ಹೀಗಾಗಿ ಭಗವದ್ಗೀತೆ ಅಂಶಗಳನ್ನು ತಿಳಿಸುವುದು ಬಹಳ ಮುಖ್ಯ. ರಾಜ್ಯದ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಬಗ್ಗೆ ಸಿಎಂ, ಶಿಕ್ಷಣ ತಜ್ಞರು, ಸಲಹಾ ಸಮಿತಿಗಳ ಜೊತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.