Publish Date: Tue, 28 Jun 2022 (07:39 IST)
Updated Date: Mon, 27 Jun 2022 (23:44 IST)
ಬೆಂಗಳೂರು : ಕಳೆದ ಎರಡು ದಿನಗಳಿಂದ ಡಿಪೋಗಳಲ್ಲಿ ಡೀಸೆಲ್ ಕೊರತೆ ಎದುರಾಗಿದ್ದು, ಇಂದು ನಗರದಲ್ಲಿ ಬಿಎಂಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಕಳೆದ ಎರಡು ದಿನಗಳಿಂದ ಡಿಪೋಗಳಲ್ಲಿ ಡೀಸೆಲ್ ಕೊರತೆ ಎದುರಾಗಿದೆ. ಆದರೆ ಇಂದು ಬಹುತೇಕ ಡಿಪೋಗಳಲ್ಲಿ ಡೀಸೆಲ್ ಖಾಲಿ ಆಗುವ ಸಾಧ್ಯತೆ ಇದೆ. ಸಗಟು ಖರೀದಿ ದರ ಎಫೆಕ್ಟ್ನಿಂದ ಬಿಎಂಟಿಸಿ ಅಕ್ಷರಶಃ ತತ್ತರಿಸಿ ಹೋಗಿದ್ದು, ಚಿಲ್ಲರೆ ವ್ಯಾಪಾರಿಗಳಿಂದ ನಿಗಮ ಡೀಸೆಲ್ ಖರೀದಿಸುತ್ತಿತ್ತು.
ಆದರೆ ಮೂರು ದಿನದಿಂದ ಚಿಲ್ಲರೆ ವ್ಯಾಪಾರಿಗಳಿಂದಲೂ ಡೀಸೆಲ್ ಸಪ್ಲೈ ಆಗುತ್ತಿಲ್ಲ. ಹೀಗಾಗಿ ಬಿಎಂಟಿಸಿ ಡಿಪೋಗಳಲ್ಲಿ ಭಾರೀ ಡೀಸೆಲ್ ಕೊರತೆ ಎದುರಾಗಿದೆ.