ಬೂಸ್ಟರ್ ಡೋಸ್ ಪಡೆದಿದ್ದರೂ ಓಮಿಕ್ರಾನ್!

Webdunia
ಶನಿವಾರ, 18 ಡಿಸೆಂಬರ್ 2021 (15:11 IST)
ಮುಂಬಯಿ :  ನ್ಯೂಯಾರ್ಕ್ ನಗರದಿಂದ ಮರಳಿದ್ದ 29 ವರ್ಷದ ವ್ಯಕ್ತಿಯಲ್ಲಿ ಓಮಿಕ್ರಾನ್ ತಳಿ ಕೊರೊನಾ ವೈರಸ್ ಇರುವುದು ಶುಕ್ರವಾರ ದೃಢಪಟ್ಟಿದೆ ಎಂದು ಬೃಹನ್ ಮುಂಬಯಿ ಮಹಾನಗರ ಪಾಲಿಕೆ (ಬಿಂಎಸಿ) ತಿಳಿಸಿದೆ.

ಅನೇಕ ಓಮಿಕ್ರಾನ್ ಕೋವಿಡ್ 19 ಪ್ರಕರಣಗಳಂತೆ ಈ ವ್ಯಕ್ತಿಯಲ್ಲಿ ಯಾವುದೇ ಸೋಂಕಿನ ಲಕ್ಷಣಗಳಿಲ್ಲ. ಈ ವ್ಯಕ್ತಿ ಅಮೆರಿಕದಲ್ಲಿ ಫೈಜರ್ ಲಸಿಕೆಯ ಮೂರು ಡೋಸ್ಗಳನ್ನು ಪಡೆದಿದ್ದರು ಎಂದು ಅದು ಹೇಳಿದೆ.

ಡಿಸೆಂಬರ್ 9ರಂದು ಮುಂಬಯಿ ವಿಮಾನ ನಿಲ್ದಾಣಕ್ಕೆ ಅಮೆರಿಕದಿಂದ ಬಂದಿದ್ದ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ 19 ಪಾಸಿಟಿವ್ ಪತ್ತೆಯಾಗಿತ್ತು.

ರೋಗಿಯನ್ನು ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿದೆ. ಅವರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ ಎಂದು BMC ಹೇಳಿಕೆಯಲ್ಲಿ ತಿಳಿಸಿದೆ. ಇದರಿಂದ ದೇಶದ ವಾಣಿಜ್ಯ ನಗರಿಯಲ್ಲಿನ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

ಇವರಲ್ಲಿ ಐವರು ಮುಂಬಯಿ ಹೊರವಲಯದವರು. ಈ ಪೈಕಿ 13 ಮಂದಿ ಈಗಾಗಲೇ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ 15 ಮಂದಿಯಲ್ಲಿ ಯಾರೊಬ್ಬರಲ್ಲಿಯೂ ಗಂಭೀರ ಲಕ್ಷಣಗಳು ಕಂಡುಬಂದಿರಲಿಲ್ಲ ಎಂದು ಬಿಎಂಸಿ ತಿಳಿಸಿದೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿ: ಎಸ್ಆರ್ ವಿಶ್ವನಾಥ್

ಮಾಧ್ಯಮಗಳಿಗೆ ನಿರ್ಬಂಧ ಪ್ರಜಾಪ್ರಭುತ್ವ ವಿರೋಧಿ ನಡೆ: ಬಿವೈ ವಿಜಯೇಂದ್ರ

ಸುಮ್ಮನಿದ್ರೆ ಸರಿ, ಇಲ್ಲದಿದ್ರೆ ಅಶೋಕ್, ವಿಜಯೇಂದ್ರ, ಬಿಜೆಪಿ ಕಚೇರಿ ಮುಂದೆನೇ ಕಸ: ಡಿಕೆ ಶಿವಕುಮಾರ್ ವಾರ್ನಿಂಗ್‌

ಸಿಎಂ ಕುರ್ಚಿ ಗುದ್ದಾಟದ ನಡುವೆ ರಾಜ್ಯದ ಆಡಳಿತದಲ್ಲಿ ಹಿನ್ನಡೆ: ನಿಖಿಲ್ ಕುಮಾರಸ್ವಾಮಿ

ಪಾನಿಪೂರಿ ಪಾನಿಯೊಳಗಿನಿಂದ ಹಾರಿದ ಜೀವಿ ನೋಡಿದ್ರೆ ಇನ್ನು ಗೋಲ್ ಗಪ್ಪಾ ತಿನ್ನಲೂ ಭಯಪಡ್ತೀರಿ Video

ಮುಂದಿನ ಸುದ್ದಿ
Show comments