ನಿವೃತ್ತಿ ಹೊಂದಿದ ನೌಕರರ ಪತಿ/ಪತ್ನಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಿ. ನಿವೃತ್ತರಾದ ಬಳಿಕ ಪ್ರಯಾಣಿಸಲು ಸಾರಿಗೆ ನಿಗಮ ವಾರ್ಷಿಕವಾಗಿ 500 ರೂ. ವನ್ನು ನಿಗಮಗಳು ವಸೂಲಿ ಮಾಡುತ್ತಿವೆ.
35 – 40 ವರ್ಷ ಸಂಸ್ಥೆ ಏಳಿಗೆಗಾಗಿ ದುಡಿದ ನೌಕರರಿಂದ 500 ವಸೂಲಿ ಮಾಡುವುದು ಸರಿಯಲ್ಲ. ನಿವೃತ್ತ ನೌಕರರಿಗೂ ಉಚಿತವಾಗಿ ಬಸ್ನಲ್ಲಿ ಅವಕಾಶ ನೀಡಬೇಕು ಅಂತಾ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಅಂದಾಜು ಹತ್ತು ಸಾವಿರ ನಿವೃತ್ತ ನೌಕರರು ಇದ್ದಾರೆ. ಜೂನ್ 11 ರಂದು ಫ್ರೀ ಬಸ್ ಸ್ಕೀಂ ಚಾಲನೆ ವೇಳೆ ನಾಲ್ಕು ನಿಗಮಗಳ ನಿವೃತ್ತಿ ಹೊಂದಿದ ನೌಕರರ ಪತಿ/,ಪತ್ನಿಗೆ ಉಚಿತ ಪ್ರಯಾಣ ಘೋಷಣೆಗೆ ಒತ್ತಾಯ ಮಾಡಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕೆಎಸ್ಆರ್ ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಮನವಿ ಮಾಡಿಕೊಂಡಿದೆ.