Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಐಸ್ಕ್ರೀಂ ತಿಂದ ಗಗನಸಖಿ ಸಾವು!

ಅವರು ಸ್ಪ ಇಚ್ಛೆಯಿಂದ ಐಸ್ ಕ್ರೀಂ ತಿಂದಿದ್ದು, ಇದಕ್ಕೂ ತಮಗೂ ಸಂಬಂಧವಿಲ್ಲ ಎಂದು ಆಸ್ಪತ್ರೆ ಸ್ಪಷ್ಟನೆ ನೀಡಿದೆ.

ಐಸ್ಕ್ರೀಂ ತಿಂದ ಗಗನಸಖಿ ಸಾವು!
ನವ ದೆಹಲಿ , ಸೋಮವಾರ, 5 ಜುಲೈ 2021 (16:49 IST)
ನವದೆಹಲಿ (ಜು. 5): ಐಸಿಯುನಲ್ಲಿ ವೈದ್ಯರ ಸಮ್ಮುಖದಲ್ಲೇ ಐಸ್ಕ್ರೀಂ ಸೇವಿಸಿದ ಗಗನಸಖಿಯೊಬ್ಬರು ಸಾವನ್ನಪ್ಪಿದ್ದಾರೆ. ರೋಸಿ ಸಾವನ್ನಪ್ಪಿದ ಮಹಿಳೆ. ಮೂಲತಃ ನಾಗಾಲ್ಯಾಂಡ್ನ ದಿಮಪುರದ ರೋಸಿ ಸಾವನ್ನಪ್ಪಿದ ಮಹಿಳೆ, ದೆಹಲಿಯ ಬಿಜ್ವಸನ್ ಪ್ರದೇಶದಲ್ಲಿ ತನ್ನ ಅಕ್ಕನ ಮಗನ ಜೊತೆ ನೆಲೆಸಿದ್ದರು. ಜೂ. 23ರಂದು ರೋಸಿಯ ಕೈ ಕಾಲುಗಳಿಂದ ರಕ್ತಸ್ರಾವ ಉಂಟಾಗಿ ತೀವ್ರ ನೋವಿನಿಂದ ಬಳಲುತ್ತಿದ್ದರು, ಈ ವೇಳೆ ಆಕೆಯ ಅಕ್ಕನ ಮಗ ಸ್ಯಾಮ್ಯುಯೆಲ್, ಚಿಕ್ಕಮ್ಮನನ್ನು ಆಸ್ಪತ್ರೆಗೆ ದಾಖಲಿಸಿದ. ಆಕೆಯ ಆರೋಗ್ಯ ಸುಧಾರಿಸದ ಹಿನ್ನಲೆ ಜೂ. 24 ರಂದುಇ ಗುರುಗ್ರಾಮದ ಸೆಕ್ಟರ್ 10ರಲ್ಲಿನ ಆಲ್ಫಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಈ ವೇಳೆ ಆಕೆಯ ಆರೋಗ್ಯ ಕೂಡ ಸುಧಾರಿಸಿದ್ದು, ಆಸ್ಪತ್ರೆಯ ವೈದ್ಯರ ಸಮ್ಮುಖದಲ್ಲಿಯೇ ಆಕೆ ಐಸ್ಕ್ರೀಂ ಸೇವಿಸಿದರು. 








































ಇದಾದ ಸ್ಪಲ್ಪ ಹೊತ್ತಿನಲ್ಲಿಯೇ ಆಕೆ ಪರಿಸ್ಥಿತಿ ಬಿಗಡಾಯಿಸಿ, ಸಾವನ್ನಪ್ಪಿದ್ದಾಳೆ.
ಇನ್ನು ಘಟನೆ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆ ಸಿಬ್ಬಂದಿ, ಐಸಿಯುನಲ್ಲಿ ಬೇರೆ ರೋಗಿ ಐಸ್ಕ್ರೀಂ ತಿನ್ನುವುದನ್ನು ನೋಡಿ ರೋಸಿ ಕೂಡ ಕೇಳಿದರು. ಅವರು ಸ್ಪ ಇಚ್ಛೆಯಿಂದ ಐಸ್ ಕ್ರೀಂ ತಿಂದಿದ್ದು, ಇದಕ್ಕೂ ತಮಗೂ ಸಂಬಂಧವಿಲ್ಲ ಎಂದಿದ್ದಾರೆ.
ಇನ್ನು ಈ ಘಟನೆ ಹಾಗೂ ವೈದ್ಯರ ನಿರ್ಲಕ್ಷ್ಯದ ಕುರಿತು ಸ್ಯಾಮುಯೆಲ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಯಬಿಟ್ಟಿದ್ದಾರೆ. ಅಲ್ಲದೇ ಆಸ್ಪತ್ರೆ ನಿರ್ಲಕ್ಷ್ಯತನದ ಬಗ್ಗೆ ದೂಷಿಸಿದ್ದಾರೆ. ಇದಾದ 24 ಗಂಟೆಗಳ ಬಳಿಕ ಸ್ಯಾಮುಯೆಲ್ ಕೂಡ ಸಾವನ್ನಪ್ಪಿದ್ದಾರೆ.
ಈ ಎರಡು ಸಾವಿನ ಹಿಂದೆ ಈಗ ಅನುಮಾನ ವ್ಯಕ್ತವಾಗಿದೆ. ಸ್ಯಾಮುಯೆಲ್ ವಿಡಿಯೋ ಹರಿ ಬಟ್ಟ ಮೇಲೆ ಆತನ ಹೋಟೆಲ್ ರೂಮ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪ ಕೇಳಿ ಬಂದಿದೆ. ಆದರೆ, ಸ್ಯಾಮುಯೆಲ್ ಮುಖದ ಮೇಲೆ ಹಲ್ಲೆ ಮಾಡಿದ ಗುರುತುಗಳು ಕಂಡು ಬಂದಿದ್ದು, ಇದು ಆತ್ಮಹತ್ಯೆ ಅಲ್ಲ ಎಂದು ಸ್ಯಾಮುಯೇಲ್ ತಂದೆ ತೊಳಿಸಿದ್ದಾರೆ.
ಅಲ್ಲದೇ, ರೋಸಿ ಮತ್ತು ಸ್ಯಾಮುಯೆಲ್ ಸಾವಿಗೆ ಆಸ್ಪತ್ರೆಯ ಸಿಬ್ಬಂದಿಯೇ ಕಾರಣ. ಆಸ್ಪತ್ರೆ ಅದರಲ್ಲೂ ಐಸಿಯುನಲ್ಲಿ ರೋಗಿಗಳಿಗೆ ಅವರು ಐಸ್ ಕ್ರೀಂ ಅನ್ನು ಹೇಗೆ ನೀಡಿದ್ದಾರೆ. ಐಸಿಯುನಲ್ಲಿ ಇಂತಹ ವಸ್ತುಗಳನ್ನು ನೀಡಬಾರದು ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಚಿಕ್ಕಮ್ಮನ ಸಾವಿನ ಕುರಿತು ನ್ಯಾಯಕ್ಕೆ ಆಗ್ರಹಿಸಿ ಆತ  ವಿಡಿಯೋ ಮಾಡಿ ಹರಿಬಿಟ್ಟ ಬಳಿಕ ಆತನ ಸಾವು ಸಂಭವಿಸಿದೆ, ಆತನ ಮುಖದ ಮೇಲೆ ಗುರುತುಗಳು ಪತ್ತೆಯಾಗಿದ್ದು, ದೇಹ ಊದಿಕೊಂಡಿದೆ. ಇದು ಆತ್ಮಹತ್ಯೆಯಲ್ಲ ಎಂಬುದು ಸ್ಪಷ್ಟವಾಗಿದೆ. ಈ ಕುರಿತು ಸರ್ಕಾರ ತಮಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು ಘಟನೆ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡು ಬಂದಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗೆ ಕಾಯುತ್ತಿದ್ದೇವೆ. ವರದಿ ಬಳಿಕ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಿಕ್ರಿಯಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಆರ್ಬಿಐ ಹೊಸ ರೂಲ್ಸ್ ಫಾಲೋ ಮಾಡದಿದ್ದರೆ ನಷ್ಟ ಗ್ಯಾರಂಟಿ..!