Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಜಕೀಯ ಸಭೆ-ಸಮಾರಂಭಕ್ಕೆ ಕಡಿವಾಣ: ಕರೊನಾ ತಡೆಗೆ ಸಿಎಂ ಬೊಮ್ಮಾಯಿ ಮಹತ್ವದ ನಿರ್ಧಾರ

ರಾಜಕೀಯ ಸಭೆ-ಸಮಾರಂಭಕ್ಕೆ ಕಡಿವಾಣ: ಕರೊನಾ ತಡೆಗೆ ಸಿಎಂ ಬೊಮ್ಮಾಯಿ ಮಹತ್ವದ ನಿರ್ಧಾರ
ಬೆಂಗಳೂರು , ಶನಿವಾರ, 4 ಸೆಪ್ಟಂಬರ್ 2021 (14:21 IST)
ಬೆಂಗಳೂರು: ರಾಜಕೀಯ ಸಭೆ, ಸಮಾರಂಭಗಳಿಗೆ ಇರದ ನಿರ್ಬಂಧ ಗಣೇಶ ಹಬ್ಬಕ್ಕೆ ಏಕೆ? ಗಣೇಶೋತ್ಸವ ಆಚರಿಸಿದ್ರೆ ಮಾತ್ರ ಕರೊನಾ ಹರಡುತ್ತಾ? ರಾಜ್ಯದಲ್ಲಿ ಪಾಲಿಕೆ ಚುನಾವಣೆ ನಡೆಯುತ್ತಿದ್ದು, ಸಾವಿರಾರು ಜನ ಮೆರವಣಿಗೆ ಮಾಡಿದ್ದಾರೆ. ಇದಕ್ಕಿಲ್ಲದ ನಿರ್ಬಂಧ ಗಣೇಶೋತ್ಸವದ ಮೇಲ್ಯಾಕೆ ಎಂಬ ಆಕ್ರೋಶ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜಕೀಯ ಸಭೆ- ಸಮಾರಂಭಗಳಿಗೆ ಕಡಿವಾಣ ಹಾಕುವ ಕುರಿತು ಮಹತ್ವದ ಸುಳಿವು ಕೊಟ್ಟಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕರೊನಾ ನಡುವೆಯೂ ರಾಜಕೀಯ ಸಭೆ, ಸಮಾರಂಭ, ರ್ಯಾಲಿಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ನಿರ್ಬಂಧ ಹೇರಲು ಕಠಿಣ ನಿಯಮಗಳನ್ನು ಜಾರಿ ಮಾಡಲಾಗುವುದು. ಕೋವಿಡ್ ಸೋಂಕು ಹರಡುವ ಭೀತಿ ದಟ್ಟವಾಗಿದ್ದರೂ ಲೆಕ್ಕಿಸದೆ ಸಭೆ-ಸಮಾರಂಭಗಳು ನಡೆದಿವೆ. ಇದಕ್ಕೆಲ್ಲ ಶೀಘ್ರವೇ ಬ್ರೇಕ್ ಹಾಕುತ್ತೇವೆ. ರಾಜಕೀಯ ಸಭೆ, ಸಮಾರಂಭಗಳಿಗೆ ಮಾರ್ಗಸೂಚಿ ಹೊರಡಿಸುತ್ತೇವೆ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ತಾಲಿಬಾನಿಗಳಿಂದ ಗುಂಡು ಹಾರಿಸಿ ಸಂಭ್ರಮ: ಮಕ್ಕಳು ಸೇರಿದಂತೆ ಹಲವರ ಸಾವು