ದೆಹಲಿ : ಮುನ್ಸಿಪಲ್ ಕಾರ್ಪೊರೇಶನ್ನ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಕಳೆದ ಭಾನುವಾರ 250 ವಾರ್ಡ್ಗಳಿಗೆ ಚುನಾವಣೆ ನಡೆದಿತ್ತು. ಇಂದು 42 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.
ಮತ ಎಣಿಕೆಗಾಗಿ ಸಕಲ ಸಿದ್ಧತೆಗಳು ನಡೆದಿವೆ. 56,000 ಇವಿಎಂಗಳಲ್ಲಿನ ಮತ ಎಣಿಕೆ ಕಾರ್ಯ ಆರಂಭಗೊಂಡಿದೆ. 1,249 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಮೊದಲ ಅಂಚೆ ಮತ ಪತ್ರಗಳ ಎಣಿಕೆ ನಡೆಯುತ್ತಿದ್ದು, ಬಳಿಕ ಇವಿಎಂ ಮತ ಎಣಿಕೆ ನಡೆಯಲಿದೆ.
ಈಗಾಗಲೇ ಚುನಾವಣಾ ಸಮೀಕ್ಷೆಗಳು ಪ್ರಕಟಗೊಂಡಿದ್ದು ಹದಿನೈದು ವರ್ಷಗಳ ಬಿಜೆಪಿ ಆಡಳಿತ ಅಂತ್ಯವಾಗಲಿದ್ದು ಪಾಲಿಕೆಯಲ್ಲಿ ಆಪ್ ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ.
ಇಂಡಿಯಾ ಟುಡೆ ಸಮೀಕ್ಷೆಯ ಪ್ರಕಾರ 250 ಸ್ಥಾನಗಳಲ್ಲಿ ಬಿಜೆಪಿ 69-91, ಎಎಪಿ 149-171, ಕಾಂಗ್ರೆಸ್ 3-7, ಇತರೆ 5-9 ಪಡೆಯಲಿದೆ. ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ ಎಎಪಿ 146-156, ಬಿಜೆಪಿ 84 -94, ಕಾಂಗ್ರೆಸ್ 6-10 ಇತರೆ 4 ಸ್ಥಾನಗಳನ್ನು ಪಡೆಯಲಿದ್ದಾರೆ. ಚುನಾವಣೆ ಗೆಲುವಿನ ಉತ್ಸಾದಲ್ಲಿರುವ ಆಪ್ ನಾಯಕರು ಇನ್ನು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲ್ಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.