Webdunia - Bharat's app for daily news and videos

Install App

ದೇಶಗಳಲ್ಲಿ ಮತ್ತೆ ಕೊರೋನಾ ಆರ್ಭಟ!

Webdunia
ಬುಧವಾರ, 16 ಮಾರ್ಚ್ 2022 (09:57 IST)
ಬೀಜಿಂಗ್ : ಕಳೆದ 2 ತಿಂಗಳು ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳನ್ನು ಕಾಡಿದ್ದ ಮಾರಕ ಒಮಿಕ್ರೋನ್ ರೂಪಾಂತರಿ ವೈರಸ್ ಇದೀಗ ಚೀನಾ ಮತ್ತು ದಕ್ಷಿಣಾ ಕೊರಿಯಾ ದೇಶಗಳನ್ನು ಮತ್ತಷ್ಟುಆವರಿಸಿಕೊಂಡಿದ್ದು ಭಾರೀ ಸೋಂಕು,

ಸಾವಿಗೆ ಕಾರಣವಾಗಿದೆ. ಚೀನಾದಲ್ಲಿ ಮಂಗಳವಾರ 5280 ಹೊಸ ಕೇಸು ದೃಢಪಟ್ಟಿದೆ. ಇದು ಸೋಮವಾರ ದಾಖಲಾಗಿದ್ದ ಪ್ರಮಾಣಕ್ಕಿಂತ ದ್ವಿಗುಣ.

ಸೋಂಕು ನಿಗ್ರಹ ವಿಷಯದಲ್ಲಿ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿ ಪ್ರದರ್ಶಿಸುತ್ತಿದ್ದರೂ, ಹೊಸ ಪ್ರಕರಣಗಳ ಮೇಲೆ ನಿಯಂತ್ರಣ ಸಾಧ್ಯವಾಗದೇ ಇರುವುದು ಸರ್ಕಾರವನ್ನು ಆತಂಕಕ್ಕೆ ಗುರಿ ಮಾಡಿದೆ.

ಅದರಲ್ಲೂ ಸ್ಥಳೀಯವಾಗಿ ಹಬ್ಬುತ್ತಿರುವ ಪ್ರಕರಣಗಳೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ 13 ನಗರಗಳನ್ನು ಪೂರ್ಣ ಲಾಕ್ಡೌನ್ಗೆ ಒಳಪಡಿಸಲಾಗಿದೆ. ಹೀಗೆ ಲಾಕ್ಡೌನ್ಗೆ ಒಳಪಟ್ಟನಾಗರಿಕರ ಸಂಖ್ಯೆ 3 ಕೋಟಿಯಷ್ಟಿದೆ.

ಇದಲ್ಲದೇ ಹಲವು ನಗರಗಳನ್ನು ಭಾಗಶಃ ನಿರ್ಬಂಧಕ್ಕೆ ಒಳಪಡಿಸಲಾಗಿದ್ದು, ಸೀಮಿತ ಕಾರ್ಯಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಚೀನಾದಲ್ಲಿ 2019ರಲ್ಲಿ ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡ ಬಳಿಕ ಇದುವರೆಗೂ 1.16 ಲಕ್ಷ ಜನರಿಗೆ ಸೋಂಕು ತಗುಲಿದೆ, 3636 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಹೇಳಿಕೊಂಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯುವ ಜನರೇ ನಿಮ್ಮ ಟಾರ್ಗೆಟ್ ಆಗಬೇಕು: ಅಧಿಕಾರಿಗಳಿಗೆ ಪ್ರಧಾನಿ ಮೋದಿ ಸೂಚನೆ

ಖಾಸಗಿ ರಸ್ತೆಗಳೆಲ್ಲಾ ಇನ್ನು ಸರ್ಕಾರದ ಸೊತ್ತು: ಸರ್ಕಾರದ ಹೊಸ ಮಸೂದೆಯಲ್ಲಿ ಏನಿದೆ

ನಾವು ಸಂಬಳಕ್ಕಾಗಿ ದುಡಿಯಲ್ಲ ಮೇಡಂ… ಜೆನ್ ಜಿ ಮಹಿಳೆಗೆ ಓರ್ವ ಸೈನಿಕ ನೀಡಿದ ಉತ್ತರ ಸಖತ್ ವೈರಲ್ Video

Karnataka Weather: ಬೆಂಗಳೂರಿಗರಿಗೇ ಗಮನಿಸಿ.. ಇಂದು ಮುಂದುವರಿಯುತ್ತಾ ಮಳೆ ಇಲ್ಲಿದೆ ನೋಡಿ ವಿವರ

1.3 ಮಿಲಿಯನ್‌ ಅನುಯಾಯಿಗಳನ್ನು ಹೊಂದಿದ್ದ ಪಾಕ್‌ ಟಿಕ್‌ಟಾಕ್‌ ಸ್ಟಾರ್‌ ಗುಂಡೇಟಿಗೆ ಬಲಿ, CCTV Video

ಮುಂದಿನ ಸುದ್ದಿ
Show comments