Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಬ್ರೇಕ್ ಫೇಲ್ ಆದಂತೆ ಕಾಣುತ್ತಿದೆ.
ಇಂದು ಒಟ್ಟು 34,047 ಕೇಸ್ ದಾಖಲಾಗಿದ್ದು, 13 ಮರಣ ಪ್ರಕರಣ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಕೊರೊನಾ ತಾಂಡವ ಮತ್ತಷ್ಟು ಹೆಚ್ಚಿದ್ದು, ಇಂದು ಬರೋಬ್ಬರಿ 21,071 ಕೇಸ್ ದಾಖಲಾಗಿದೆ. ರಾಜ್ಯದ ಪಾಸಿಟಿವಿಟಿ ರೇಟ್ 19.29% ಕ್ಕೇರಿದೆ.
ಜಿಲ್ಲೆಗಳಲ್ಲೂ ಕೂಡ ಕೊರೊನಾ ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಹಾಸನ, ಮೈಸೂರು ಮತ್ತು ತುಮಕೂರು ಮೂರು ಜಿಲ್ಲೆಗಳಲ್ಲಿ ಸಾವಿರಕ್ಕೂ ಅಧಿಕ ಕೇಸ್ ದಾಖಲಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,97,982 ರಾಜ್ಯದಲ್ಲಿ ಇಂದು ಒಟ್ಟು 5,902 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಈವರೆಗೆ ರಾಜ್ಯದಲ್ಲಿ ಒಟ್ಟು 32,20,087 ಮಂದಿಗೆ ಕೊರೊನಾ ಬಂದಿದೆ. 39,83,645 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.0.03 ರಷ್ಟಿದೆ. ಬೆಂಗಳೂರಿನಲ್ಲಿ ಒಟ್ಟು 21,071 ಪಾಸಿಟಿವ್ ಕೇಸ್ ದಾಖಲಾದರೆ, 3,978 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 5 ಮರಣ ಪ್ರಕರಣ ದಾಖಲಾಗಿದೆ.