Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಡುಗೆ ಅನಿಲದ ಬೆಲೆ ಏರಿಕೆ!

ಅಡುಗೆ ಅನಿಲದ ಬೆಲೆ ಏರಿಕೆ!
ನವದೆಹಲಿ , ಸೋಮವಾರ, 8 ಆಗಸ್ಟ್ 2022 (07:59 IST)
ನವದೆಹಲಿ  : ಪೈಪ್ಲೈನ್ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಯೂನಿಟ್ಗೆ 2.63 ರೂ. ರಷ್ಟು ಹೆಚ್ಚಿಸಲಾಗಿದೆ.

ರಾಷ್ಟ್ರ ರಾಜಧಾನಿ ಮತ್ತು ಅಕ್ಕಪಕ್ಕದ ನಗರಗಳಲ್ಲಿನ ಮನೆಗಳಿಗೆ ಅಡುಗೆ ಅನಿಲವನ್ನು ಪೈಪ್ ಮೂಲಕ ಬಿಡಲಾಗುತ್ತೆ. ಈ ಹಿನ್ನೆಲೆ ಪೈಪ್ಲೈನ್ ಅಡುಗೆ ಅನಿಲಗಳ ಬೆಲೆಯನ್ನು ಆಗಾಗ ಹೆಚ್ಚಿಸಲಾಗುವುದು. 

ಜುಲೈ 26 ರಂದು ಪೈಪ್ಲೈನ್ ಅಡುಗೆ ಅನಿಲ ಪರಿಷ್ಕರಿಸಿ ಪ್ರತಿ ಸ್ಟಾಂಡರ್ಡ್ ಕ್ಯೂಬಿಕ್ ಮೀಟರ್ಗೆ 2.1 ರೂ. ಹೆಚ್ಚಿಸಲಾಗಿತ್ತು. ಆದರೆ ಬೆಲೆ ಹೆಚ್ಚಿಸಿ 2 ವಾರವೂ ಇನ್ನೂ ಕಳೆದಿಲ್ಲ. ಈಗಾಗಲೇ ಮತ್ತೆ 2.63 ರೂ. ಏರಿಕೆ ಮಾಡಲಾಗಿದೆ. 

ಈ ಕುರಿತು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಟ್ವೀಟ್ ಮಾಡಿದ್ದು, ಈ ಹಿಂದೆ ಪೈಪ್ಲೈನ್ ಅಡುಗೆ ಅನಿಲ ರೂ. 47.96 ರಷ್ಟಿತ್ತು. ಆದರೆ ದೆಹಲಿಯಲ್ಲಿ ಪೈಪ್ ಮೂಲಕ ಅಡುಗೆ ಅನಿಲದ ಬೆಲೆ ಈಗ ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ಗೆ ರೂ 50.59 ಆಗಲಿದೆ. ಈ ಹೆಚ್ಚಳವು ‘ಇನ್ಪುಟ್ ಗ್ಯಾಸ್ ವೆಚ್ಚದಲ್ಲಿನ ಹೆಚ್ಚಳವನ್ನು ಭಾಗಶಃ ಸರಿದೂಗಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಸ್ ಉರುಳಿ 20ಕ್ಕೂ ಹೆಚ್ಚು ಜನರಿಗೆ ಗಾಯ..!