Publish Date: Mon, 08 Nov 2021 (14:28 IST)
Updated Date: Mon, 08 Nov 2021 (14:33 IST)
ಬೆಂಗಳೂರು : ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಹೋಟೆಲ್ಗಳಲ್ಲಿ ದರ ಏರಿಕೆ ಮಾಡಲಾಗುತ್ತಿದ್ದು ಹೋಟೆಲ್ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿಲಿದೆ.
ಊಟ, ತಿಂಡಿ, ಕಾಫಿ ಸೇರಿದಂತೆ ಎಲ್ಲಾ ಪದಾರ್ಥಗಳ ಬೆಲೆ ಏರಿಕೆ ಮಾಡಲಾಗಿದೆ. ಪಾರ್ಸೆಲ್ ದರವೂ ಶೇ.5ರಿಂದ 10ರಷ್ಟು ಹೆಚ್ಚಳವಾಗಿದ್ದು ಸೆಲ್ಫ್ ಸರ್ವಿಸ್ ಆಹಾರದ ಬೆಲೆಯಲ್ಲೂ ಹೆಚ್ಚಳವಾಗಿದೆ. ಹೋಟೆಲ್ ಮಾಲೀಕರು ಶೇ.5ರಿಂದ 10ರಷ್ಟು ದರ ಹೆಚ್ಚಳ ಮಾಡಿದ್ದಾರೆ.
ನಿರಂತರವಾಗಿ ಏರಿಕೆಯಾಗ್ತಿರೊ ವಾಣಿಜ್ಯ ಅಡುಗೆ ಅನಿಲ ಬೆಲೆ, ದಿನಸಿ ಸಾಮಾಗ್ರಿಗಳ ಏರಿಕೆಯಿಂದ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ. ಅಡುಗೆ ಎಣ್ಣೆಯ ಬೆಲೆಯೂ ದುಬಾರಿಯಾಗಿದೆ. 1794 ರೂಪಾಯಿಗೆ ಸಿಗಬೇಕಿದ್ದ 19 ಕೆ.ಜಿ. ತೂಕದ ವಾಣಿಜ್ಯ ಸಿಲೆಂಡರ್ ದರ 2 ಸಾವಿರ ರೂ. ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್ಗಳು ಬೆಲೆ ಏರಿಕೆಗೆ ಮುಂದಾಗಿದ್ದಾರೆ. ಈ ಬಗ್ಗೆ ಕೆಲ ದಿನಗಳ ಹಿಂದೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮಾಹಿತಿ ಹಂಚಿಕೊಂಡಿದ್ದರು. ಸದ್ಯ ದೀಪಾವಳಿ ಬಳಿಕ ದರ ಏರಿಕೆ ಜಾರಿ ಮಾಡಿವುದಾಗಿ ತಿಳಿಸಿದ್ದ ಪಿ.ಸಿ.ರಾವ್, ಇಂದಿನಿಂದ ದರ ಏರಿಕೆ ನಿಯಮ ಜಾರಿ ಮಾಡಲು ಹೋಟೆಲ್ಗಳಿಗೆ ಸೂಚಿಸಿದ್ದಾರೆ.
Ramya kosira
Publish Date: Mon, 08 Nov 2021 (14:28 IST)
Updated Date: Mon, 08 Nov 2021 (14:33 IST)