Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಎಂಎಲ್ ಎಗಳ ಜತೆಗೆ ಸಚಿವ ಸ್ಥಾನಕ್ಕಾಗಿ ಇದೀಗ ಜೆಡಿಎಸ್, ಕಾಂಗ್ರೆಸ್ ಎಂಎಲ್ ಸಿಗಳೂ ಧ್ವನಿ ಎತ್ತಿದ್ದಾರೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭ ನಾವು ಎಂಎಲ್ ಎಗಳ ಜತೆ ರೆಸಾರ್ಟ್ ನಲ್ಲಿರಬೇಕಿತ್ತು. ಸರ್ಕಾರ ರಚಿಸಲು ನಮ್ಮ ಸಹಾಯ ತೆಗೆದುಕೊಂಡಿರಿ. ಈಗ ಅಧಿಕಾರ ಸಿಕ್ಕಿದ ಮೇಲೆ ನಾವು ಬೇಡವೇ ಎಂದು ಜೆಡಿಎಸ್ ಎಂಎಲ್ ಸಿಗಳು ವರಿಷ್ಠರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ ದೆಹಲಿಗೆ ತೆರಳಿರುವ ಕಾಂಗ್ರೆಸ್ ಎಂಎಲ್ ಸಿ ಎಚ್ ಎಂ ರೇವಣ್ಣ ಕೂಡಾ ನಾನೂ ಸಚಿವ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ. ನಾನು ಸ್ಪರ್ಧಿಸದೇ ಇದ್ದಾಗಲೂ ಹೆಬ್ಬಾಳ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ದುಡಿದಿದ್ದೇನೆ. ಚೆನ್ನಪಟ್ಟಣದಲ್ಲಿ ಕಾಂಗ್ರೆಸ್ ಪರ ಮತ ಹೆಚ್ಚು ಮಾಡಿದ್ದೇನೆ. ನನ್ನ ಶ್ರಮ ಗುರುತಿಸಿ ಸಚಿವ ಸ್ಥಾನ ನೀಡಿ ಎಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.