ಬೆಂಗಳೂರು: ನಿಯಮ ಬಾಹಿರವಾಗಿ ತಮ್ಮ ಹತ್ತಿರದ ಸಂಬಂಧಿಗೆ ಬೆಂಗಳೂರು ನಗರ ಡಿಸಿ ಹುದ್ದೆ ನೀಡಿದ ಆರೋಪ ಸಿಎಂ ಸಿದ್ದರಾಮಯ್ಯ ಹೆಗಲಿಗೇರಿದೆ.
ಬಿಜೆಪಿ ಎನ್. ಆರ್ ರಮೇಶ್ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಹಿಂದಿನ ಡಿಸಿ ಶಂಕರ್ ಕೂಡಾ ಸಿದ್ದರಾಮಯ್ಯ ಸಂಬಂಧಿ. ಇದೀಗ ಅವರ ಸ್ಥಾನಕ್ಕೆ ಬಂದಿರುವ ದಯಾನಂದ್ ಕೂಡಾ ಸಿದ್ದರಾಮಯ್ಯನವರ ಸಂಬಂಧಿ ಎಂದು ರಮೇಶ್ ಆರೋಪಿಸಿದ್ದಾರೆ.
ಬೆಂಗಳೂರು ನಗರ ಡಿಸಿ ಹುದ್ದೆ ನಿರ್ವಹಿಸಲು ಕನಿಷ್ಟ 4 ವರ್ಷಗಳ ಸೇವಾ ಹಿರಿತನವಿರಬೇಕು. ಆದರೆ ಐಎಎಸ್ ಶ್ರೇಣಿಗೆ ಬಡ್ತಿ ಪಡೆದು ಕೇವಲ 12 ದಿನಗಳಾದ ಬೆನ್ನಲ್ಲೇ ದಯಾನಂದ್ ಗೆ ಬೆಂಗಳೂರು ನಗರ ಡಿಸಿ ಹುದ್ದೆ ನೀಡಲಾಗಿದೆ. ಇದೆಲ್ಲಾ ಚುನಾವಣೆ ಸಂದರ್ಭದಲ್ಲಿ ತಮ್ಮ ಪರ ಕೆಲಸ ಮಾಡಲು ಸಿಎಂ ಮಾಡುವ ಕುತಂತ್ರ ಎಂದು ರಮೇಶ್ ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ