Publish Date: Sat, 13 Oct 2018 (14:20 IST)
Updated Date: Sat, 13 Oct 2018 (14:24 IST)
ಮೈಸೂರು : ಮೈಸೂರು ದಸರಾ ಅಂಗವಾಗಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮತ್ತೊಮ್ಮೆ ಬಹಿರಂಗವಾಗಿ ಕಣ್ಣೀರು ಹಾಕಿದ್ದಾರೆ.
ಮೈಸೂರು ದಸರಾ ಅಂಗವಾಗಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಒಳಿತು ಮಾಡು ಮನುಸ, ನೀ ಇರೋದು ಮೂರು ದಿವಸ ಎಂದು ಹಾಡು ಹಾಡಿದ್ದಾರೆ.
ಅವರು ಹಾಡಿಗೆ ಮರುಳಾದ ಸಿಎಂ ಹಾಡನ್ನು ಮತ್ತೊಮ್ಮೆ ಹಾಡುವಂತೆ ಗಾಯಕ ವಿಜಯ್ ಪ್ರಕಾಶ್ ಅವರಲ್ಲಿ ಮನವಿ ಮಾಡಿದ್ದಾರೆ. ಮತ್ತೆ ಅದೇ ಹಾಡನ್ನು ವಿಜಯ್ ಪ್ರಕಾಶ್ ಹಾಗೂ ರಕ್ಷಿತ್ ಜೊತೆಯಾಗಿ ಹಾಡಿದ್ದು, ಅದನ್ನು ಕೇಳಿದ ಸಿಎಂ ಕಣ್ಣೀರು ಹಾಕಿದ್ದಾರೆ. ಹಾಡು ಮುಗಿದ ಬಳಿಕ ಸಿಎಂ ವಿಜಯ್ ಪ್ರಕಾಶ್ ಅವರಿಗೆ ಕೈ ಮುಗಿದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.