Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸರ್ಕಾರಿ ಉದ್ಯೋಗಿಗಳಿಗೆ ಕೇಂದ್ರದ ಮಹತ್ವದ ಸೂಚನೆ!

ಸರ್ಕಾರಿ ಉದ್ಯೋಗಿಗಳಿಗೆ ಕೇಂದ್ರದ ಮಹತ್ವದ ಸೂಚನೆ!
ನವದೆಹಲಿ , ಶನಿವಾರ, 25 ಜೂನ್ 2022 (11:56 IST)
ನವದೆಹಲಿ : ಹಣಕಾಸು ಸಚಿವಾಲಯವು ಮಿತವ್ಯಯ ಮಂತ್ರ ಪಠಿಸಿದೆ.

ಸರ್ಕಾರಿ ಉದ್ಯೋಗಿಗಳು ಸರ್ಕಾರದ ವೆಚ್ಚದಲ್ಲಿ ಪ್ರಯಾಣ ನಡೆಸುವಾಗ ಲಭ್ಯವಿರುವ ಅತಿ ಅಗ್ಗದ ಬೆಲೆಯಲ್ಲಿ ವಿಮಾನದ ಟಿಕೆಟ್ಗಳನ್ನು ಖರೀದಿಸಬೇಕು ಹಾಗೂ ಪ್ರವಾಸದ 21 ದಿನಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬೇಕು’ ಎಂದು ಆದೇಶ ಹೊರಡಿಸಿದೆ.

ಈ ಮೂಲಕ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ‘ಸರ್ಕಾರಿ ವೆಚ್ಚದಲ್ಲಿ ಪ್ರಯಾಣ ಮಾಡುವಾಗ ಉದ್ಯೋಗಿಗಳು, ಬಾಲ್ಮರ್ ಲೌರಿ ಮತ್ತು ಕೊ, ಅಶೋಕ ಟ್ರಾವೆಲ್ಸ್ ಆ್ಯಂಡ್ ಟೂರ್ಸ್ ಹಾಗೂ ಐಆರ್ಸಿಟಿಸಿ ಈ ಮೂರು ಅಧಿಕೃತ ಟ್ರಾವೆಲ್ ಏಜೆಂಟ್ಗಳ ಬಳಿಯಿಂದ ಮಾತ್ರ ವಿಮಾನ ನಿಲ್ದಾಣದ ಟಿಕೆಟ್ಗಳನ್ನು ಖರೀದಿಸಬಹುದಾಗಿದೆ.

ಉದ್ಯೋಗಿಗಳು ತಮ್ಮ ನಿಗದಿತ ಪ್ರಯಾಣ ವರ್ಗದಲ್ಲಿ ಲಭ್ಯವಿರುವ ಅತಿ ಅಗ್ಗದ ಬೆಲೆಯ ವಿಮಾನಗಳ ಟಿಕೆಟ್ ಖರೀದಿಸಬೇಕು’ ಎಂದು ಸಚಿವಾಲಯ ಸೂಚಿಸಿದೆ.

‘ಉದ್ಯೋಗಿಗಳು ಪ್ರವಾಸದ ಕಾರ್ಯಕ್ರಮವು ಅನುಮೋದನೆ ಪ್ರಕ್ರಿಯೆಯಲ್ಲಿದ್ದರೂ ಉದ್ದೇಶಿತ ಪ್ರಯಾಣಕ್ಕಾಗಿ ಬುಕಿಂಗ್ ಮಾಡಬಹುದು. ಆದರೆ ಅನಗತ್ಯವಾಗಿ ಟಿಕೆಟ್ ರದ್ದು ಮಾಡಬಾರದು’ ಎಂದು ಸಚಿವಾಲಯ ಸೂಚಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾದ ತಿಂಗಳಲ್ಲೇ 4 ತಿಂಗಳ ಗರ್ಭಿಣಿ! ಏನಿದು ಘಟನೆ?