Webdunia - Bharat's app for daily news and videos

Install App

ಬೊಮ್ಮಾಯಿ ಕೊನೆಯ ಬಜೆಟ್ ಮಂಡನೆ : ನಿರೀಕ್ಷೆಗಳೇನು?

Webdunia
ಶುಕ್ರವಾರ, 17 ಫೆಬ್ರವರಿ 2023 (08:50 IST)
ಬೆಂಗಳೂರು : ಚುನಾವಣೆ ಸನಿಹದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಶುಕ್ರವಾರ ಮಂಡನೆಯಾಗಲಿದೆ. ವಿಧಾನಸಭೆಯಲ್ಲಿ ನಾಳೆ ಬೆಳಗ್ಗೆ 10:15ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಎರಡನೇ ಬಜೆಟ್ ಮಂಡಿಸಲಿದ್ದಾರೆ.

ಚುನಾವಣೆ ಸನಿಹದಲ್ಲಿ ಇರುವುದರಿಂದ ಈ ಬಜೆಟ್ ಸಹಜವಾಗಿಯೇ ಜನಪ್ರಿಯತೆಯ ಹಳಿ ಮೇಲೆ ಸಾಗುವ ನಿರೀಕ್ಷೆ ಇದೆ.

ಉಚಿತ ಘೋಷಣೆ ಒಳಗೊಂಡಂತೆ, ಜನತೆಗೆ ತೆರಿಗೆ ಹೊರೆ ಇಲ್ಲದ ಬಜೆಟ್ ಮಂಡನೆಗೆ ಸಿಎಂ ಬೊಮ್ಮಾಯಿ ಪ್ಲಾನ್ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್-ಜೆಡಿಎಸ್ಗೆ ಟಕ್ಕರ್ ಕೊಟ್ಟು, ಮತ ಫಸಲು ತೆಗೆಯುವುದಕ್ಕೆ ಸಿಎಂ ಬೊಮ್ಮಾಯಿ ತಮ್ಮ ಬಜೆಟ್ ಮೂಲಕ ಪ್ರಯತ್ನಿಸಲಿದ್ದಾರೆ. 

ಬಜೆಟ್ ನಿರೀಕ್ಷೆಗಳೇನು?

ಕಾಂಗ್ರೆಸ್ನ ಗೃಹ ಲಕ್ಷ್ಮಿ ಯೋಜನೆಗೆ ಪ್ರತಿಯಾಗಿ ಸ್ತ್ರೀಶಕ್ತಿ ಯೋಜನೆ, ರೈತರಿಗೆ ಬಡ್ಡಿರಹಿತ ಸಾಲ ಸೌಲಭ್ಯ 5 ಲಕ್ಷ ರೂ.ಗೆ ಹೆಚ್ಚಳ, ಸ್ತ್ರೀಶಕ್ತಿ ಸಂಘಗಳ ಸಾಲದ ಮೊತ್ತ ಹೆಚ್ಚಳ ಸಾಧ್ಯತೆ,

ಕುಲ ಕಸುಬುಗಳ ಪ್ರೋತ್ಸಾಹಕ್ಕೆ ವಿಶೇಷ ಯೋಜನೆ, ಹೋಬಳಿ ಮಟ್ಟದಲ್ಲೂ ನಮ್ಮ ಕ್ಲಿನಿಕ್ ಅನುಷ್ಠಾನ, ಬೆಂಗಳೂರು ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್, ವಿವಿಧ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ;

ಅನುದಾನ, ನೀರಾವರಿ ಯೋಜನೆಗಳಿಗೆ ಹೆಚ್ಚು ಹಣ ಮೀಸಲು, ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಅನುಷ್ಠಾನ, ಪುನೀತ್ ರಾಜ್ಕುಮಾರ್, ಅಂಬರೀಶ್ ಸ್ಮಾರಕ ಘೋಷಣೆ ಸಾಧ್ಯತೆ ಇದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

DK Shivakumar: ನೀವು ಮನೆ ಸರಿಯಾಗಿ ಕಟ್ಟಿಕೊಳ್ಬೇಕು, ಆಗ ನೀರು ಬರಲ್ಲ: ಡಿಕೆ ಶಿವಕುಮಾರ್

Bengaluru Rains: ಬೆಳಿಗ್ಗೆಯಿಂದಲೇ ಶುರು ಮಳೆ, ಕಚೇರಿಗೆ ಹೋಗುವವರು ಗಮನಿಸಿ

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂದಿಲ್ಲ ಎಂದ ಡಿಕೆಶಿ: ಪ್ರತೀ ತಿಂಗಳು ಅಂದ್ರೆ ಏನರ್ಥ

Karnataka Weather: ಬೆಂಗಳೂರಿಗೆ ಇನ್ನೆಷ್ಟು ದಿನ ಮಳೆ, ಯಾವ ಜಿಲ್ಲೆಗೆ ಏನು ಅಲರ್ಟ್ ಇಲ್ಲಿದೆ ವಿವರ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಮುಂದಿನ ಸುದ್ದಿ
Show comments