Publish Date: Sun, 30 Sep 2018 (11:04 IST)
Updated Date: Sun, 30 Sep 2018 (11:05 IST)
ಬೆಂಗಳೂರು: ಭಾರತ ರತ್ನ ಎಂ ವಿಶ್ವೇಶ್ವರಯ್ಯನವರ ಪ್ರತಿಮೆ ಉದ್ಘಾಟಿಸಲು ಹೋಗಿ ಅವರ ಹೆಸರು ಹೇಳಲು ತಡವರಿಸಿದ ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಶಂಕರ್ ಅವರನ್ನು ಬಿಜೆಪಿ ಕಟುವಾಗಿ ಟೀಕಿಸಿದೆ.
ವಿಶ್ವೇಶ್ವರಯ್ಯನವರ ಪ್ರತಿಮೆ ಉದ್ಘಾಟಿಸಲು ಬಂದ ಸಚಿವ ಶಂಕರ್ ತಮ್ಮ ಪಕ್ಕದಲ್ಲಿದ್ದವರ ಬಳಿ ಕೇಳಿ ಅವರ ಹೆಸರು ತಿಳಿದುಕೊಂಡಿದ್ದು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ಬಗ್ಗೆ ಬಿಜೆಪಿ ಲೇವಡಿ ಮಾಡಿದೆ.
‘ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರು ವಿಶ್ವೇಶ್ವರಯ್ಯನವರ ಹೆಸರು ಹೇಳಲು ತಡವರಿಸಿದರು ಮತ್ತು ಅವರದ್ದೇ ಪಕ್ಷದ ಶಾಸಕರೊಬ್ಬರಿಗೆ ವಿಶ್ವೇಶ್ವರಯ್ಯ ಎಂದರೆ ಯಾರೆಂದೇ ಗೊತ್ತಿಲ್ಲ. ಕಾಂಗ್ರೆಸ್ ನವರ ಸಮಸ್ಯೆಯೇ ಇದು. ಅವರಿಗೆ ಗಾಂಧಿ ಕುಟುಂಬದ ಹೆಸರು ಬಿಟ್ಟರೆ ಬೇರೆ ಯಾರನ್ನೂ ಗೊತ್ತಿರುವುದಿಲ್ಲ’ ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮೂಲಕ ವ್ಯಂಗ್ಯ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.