Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮಾಜಿ ಶಾಸಕ ಸುರೇಶಗೌಡ ಪಾಟೀಲ್‌ಗೆ ಟಿಕೆಟ್ ನೀಡದಿದ್ರೆ ಬ್ಯಾಡಗಿ ಬಂದ್‌ಗೆ ಕರೆ ನೀಡಲಾಗುವುದು ಎಂದು ಬಿಜೆಪಿ ಪಕ್ಷದ ಭಿನ್ನಮತೀಯರು ಗುಡುಗಿದ್ದಾರೆ.
ಹಾವೇರಿ ಜಿಲ್ಲೆ ಬ್ಯಾಡಗಿ ನಗರದ ಎಪಿಎಂಸಿ ಬಿಡಿ ಪಾಟೀಲ್ ಎಂಡ್ ಸನ್ಸ್ ಬಳಿ ಕೋಲಾಹಲ ಸೃಷ್ಟಿಸಿದ ಬಿಜೆಪಿ ಮುಖಂಡರು ಕೊಟ್ಟ ಮಾತು ತಪ್ಪಿದ ಯಡಿಯೂರಪ್ಪ ವಿರುದ್ಧ ಬಾಯಿಬಡಕೊಂಡು, ಮಹಿಳೆಯರು ಬೀರು ಬಿಸಲಲ್ಲೆ ಕುಳಿತು ಕಣ್ಣಿರು ಹಾಕಿದ ಘಟನೆ ವರದಿಯಾಗಿದೆ.
ಸುರೇಶಗೌಡ ಬದಲಿಗೆ ವಿರುಪಾಕ್ಷಪ್ಪ ಬಳ್ಳಾರಿ ಟಿಕೆಟ್ ನೀಡಲಾಗಿದೆ ಎಂಬ ಸುದ್ದಿಯಿಂದ ಕಂಗಲಾಗಿರುವ ಕಾರ್ಯಕರ್ತರು, ಬಿಜೆಪಿ ಎಂದ್ರೆ ಬ್ಯಾಡಗಿ ಬ್ಯಾಡಗಿ ಅಂದ್ರೆ ಬಿಜೆಪಿ ಅಂತಾ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ವತಃ ಸುರೆಶಗೌಡ್ರನ್ನು ಕರೆಯಿಸಿ ನಿನಗೆ ಈ ಭಾರಿ ಟಿಕೇಟ್ ಇಲ್ಲಾ ಎಂದಿರುವ ಯಡಿಯೂರಪ್ಪ, ರಾಜ್ಯಾದ್ಯಕ್ಷರೆ ಈ ರೀತಿ ಹೇಳಿದ್ದಕ್ಕೆ ಬ್ಯಾಡಗಿಯಲ್ಲಿ ಬುಗಿಲೆದ್ದ ಬಿನ್ನಮತ ಉಲ್ಬಣಗೊಂಡಿದ್ದು ಟಿಕೆಟ್ ಸಿಗದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ
ಸುರೇಶಗೌಡ ಪಾಟೀಲ್ ಸಮದಾನ ಮಾಡಿದರು ಸುಮ್ಮನಾಗದ ಬಿನ್ನಮತ ಬಿಜೆಪಿ ಕಾರ್ಯಕರ್ತರು, ಯಡಿಯೂರಪ್ಪ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.