Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಜಧಾನಿಗೆ ಆತಂಕ! ಹಂದಿ ಜ್ವರಕ್ಕೆ ಬಲಿ

ರಾಜಧಾನಿಗೆ ಆತಂಕ! ಹಂದಿ ಜ್ವರಕ್ಕೆ ಬಲಿ
ಬೆಂಗಳೂರು , ಸೋಮವಾರ, 6 ಜೂನ್ 2022 (11:25 IST)
ತಿರುವನಂತಪುರಂ : ಈಗಾಗಲೇ ಕೋವಿಡ್ 4ನೇ ಅಲೆ ಭಾರತದ ಕೆಲ ರಾಜ್ಯಗಳಿಗೆ ಅಪ್ಪಳಿಸಿದೆ.

ಓಮಿಕ್ರಾನ್ ಉಪತಳಿಗಳಾದ ಬಿಎ-1, 2, 3, 4, 5 ತಳಿಗಳು ಸಾವಿರಾರು ಜನರನ್ನು ಬಾದಿಸುತ್ತಿವೆ. ಈ ಬೆನ್ನಲ್ಲೇ ಕೇರಳಕ್ಕೆ ಹಂದಿಜ್ವರ ಮತ್ತೆ ಲಗ್ಗೆಯಿಟ್ಟಿದೆ.

ಇಲ್ಲಿನ ಕೋಯಿಕ್ಕೋಡ್ನ ಉಲಿಯೇರಿ ಪ್ರದೇಶದಲ್ಲಿ 12 ವರ್ಷದ ಹುಡುಗಿಯೊಬ್ಬರಿಗೆ ಎಚ್1-ಎನ್1 ಹಂದಿಜ್ವರ ಕಾಣಿಸಿಕೊಂಡಿದ್ದು, ನಿನ್ನೆ ಮೃತಪಟ್ಟಿದ್ದಾರೆ. ಈಚೆಗಷ್ಟೇ ಕೇರಳದ ಈ ಹುಡುಗಿ ಬೆಂಗಳೂರಿಗೆ ಭೇಟಿ ನೀಡಿದ್ದರು.

ಬೆಂಗಳೂರಿನಿಂದ ಹಿಂದಿರುಗಿದ ಬಳಿಕ ಕೇರಳದ ಕೋಯಿಲಂಡಿ ತಾಲೂಕು ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಎಚ್1-ಎನ್1 ಸೋಂಕು ಇರುವುದು ದೃಢಪಟ್ಟಿತು. ತಕ್ಷಣ ಹುಡುಗಿಯನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ವರ್ಗಾಯಿಸಲಾಯಿತು.

ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ನಿನ್ನೆ ಮೃತಪಟ್ಟಿದ್ದಾಳೆ. ಬಾಲಕಿ ಸಂಪರ್ಕದಲ್ಲಿದ್ದ ಅವಳಿ ಸಹೋದರಿಗೂ ಎಚ್1-ಎನ್1 ಇರುವುದು ಪತ್ತೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 


Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ಕೊರೊನಾ ಭಾರೀ ಏರಿಕೆ!