Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೆಂಗಳೂರಿನಲ್ಲಿ 100 ಅಡಿ ಆಳದ ಹಳಕ್ಕೆ ಉರುಳಿದ ಸ್ಕೂಲ್‌ ಬಸ್!

ಬೆಂಗಳೂರಿನಲ್ಲಿ 100 ಅಡಿ ಆಳದ ಹಳಕ್ಕೆ ಉರುಳಿದ ಸ್ಕೂಲ್‌ ಬಸ್!
bengaluru , ಗುರುವಾರ, 2 ಜೂನ್ 2022 (14:52 IST)

ಶಾಲಾ ಮಕ್ಕಳನ್ನು ಕರೆತರಲು ಹೋಗುತ್ತಿದ್ದ ಸ್ಕೂಲ್‌ ಬಸ್‌ ೧೦೦ ಅಡಿ ಆಳದ ಹಳ್ಳಕ್ಕೆ ಬಿದ್ದ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಸಮೀಪದ ಕೂಡ್ಲು ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಹೆಚ್‌ಎಸ್‌ಆರ್ ಲೇಔಟ್‌ನ ಫ್ರೀಡಂ ಇಂಟರ್‌ನ್ಯಾಷನಲ್ ಸ್ಕೂಲ್‌ಗೆ ಸೇರಿದ ಬಸ್ ಹಳ್ಳಕ್ಕೆ ಉರುಳಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲು ಹೋಗುತ್ತಿದ್ದ ವೇಳೆ ಬಸ್‌ ಕೂಡ್ಲು ಬಳಿ ಇದ್ದ ಬಂಡೆ ಹಳ್ಳಕ್ಕೆ ಬಿದ್ದಿದೆ. ಅದೃಷ್ಟವಶಾತ್ ಘಟನೆ ವೇಳೆ ಬಸ್‌ನಲ್ಲಿ ಮಕ್ಕಳು ಇರಲಿಲ್ಲ. ಆದರೆ ಬಸ್ ಚಾಲಕನಿಗೆ ಗಂಭೀರ ಗಾಯಗಳಾಗಿವೆ.
ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಕೂಡ್ಲು ಬಳಿಯ ರಸ್ತೆ ಪಕ್ಕ ಇರುವ ಬಂಡೆ ಹಳ್ಳ 100 ಅಡಿಗೂ ಹೆಚ್ಚು ಆಳವಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಹಳ್ಳವನ್ನು ಮುಚ್ಚಿಸಲು ಸ್ಥಳೀಯರು ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರು. ಆದರೂ ಯಾವುದೇ ಪ್ರಯೋಜನವಾಗಿರದ ಕಾರಣ ಇದೀಗ ಅಪಘಾತದಿಂದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಕೊರೊನಾ ಪಾಟಿಸಿವ್‌