Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಳ್ಳಾರಿ ಟು ಬೆಂಗಳೂರು: ಅಣ್ಣಾ ಹಜಾರೆ ಬೆಂಬಲಿಸಿ ಪಾದಯಾತ್ರೆ ಶುರು

ಬಳ್ಳಾರಿ ಟು ಬೆಂಗಳೂರು: ಅಣ್ಣಾ ಹಜಾರೆ ಬೆಂಬಲಿಸಿ ಪಾದಯಾತ್ರೆ ಶುರು
ಬಳ್ಳಾರಿ: , ಶುಕ್ರವಾರ, 23 ಮಾರ್ಚ್ 2018 (13:50 IST)
ಸಾಮಾಜಿಕ ಹೋರಾಟಗಾರ ರಾಜಶೇಖರ್ ಮುಲಾಲಿಯಿಂದ ಪಾದಯಾತ್ರೆ ಆರಂಭವಾಗಿದೆ. ಬಳ್ಳಾರಿಯಿಂದ ಆರಂಭಗೊಂಡಿರುವ ಪಾದಯಾತ್ರೆ ಬೆಂಗಳೂರುವರೆಗೆ ನಡೆಯಲಿದೆ. ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಅಣ್ಣಾ ಹಜಾರೆ ಫೌಂಡೇಶನ್ ವತಿಯಿಂದ  50ಕ್ಕೂ ಹೆಚ್ಚು ಸದಸ್ಯರು ಈ  ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಬಳ್ಳಾರಿಯ ಮೋತಿ ವೃತ್ತದ ಬಳಿ ಧ್ವಜಾರೋಹಣ ಮಾಡಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಕಲ್ಯಾಣಮಠ ಶ್ರೀ, ನಂದಿಪುರ ಸ್ವಾಮೀಜಿ, ಹೂವಿನಹಡಗಲಿ ಗವಿಮಠದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪಾದಯಾತ್ರೆಯುದ್ದಕ್ಕೂ ಮತದಾನ ಜಾಗೃತಿ, ಜಾಗೃತಿ ಶಿಬಿರ, ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಹೋರಾಟದಂತಹ ವಿಷಯಗಳ ಮೇಲೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲಾಗುತ್ತದೆ. ನಿವೃತ್ತ ಐಪಿಎಸ್ ಅಧಿಕಾರಿಯ ಅಕ್ರಮ ಆಸ್ತಿ ಸೇರಿದಂತೆ ಹಲವು ದಾಖಲು ಬಿಡುಗಡೆ ಮಾಡುವುದಾಗಿ ಅಣ್ಣಾ ಹಜಾರೆ ಫೌಂಡೇಶನ್ ಸಂಸ್ಥಾಪಕ ರಾಜಶೇಖರ್ ಮುಲಾಲಿ ಹೇಳಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸಭಾ ಚುನಾವಣೆ: ಜೆಡಿಎಸ್ ರೆಬಲ್ ಶಾಸಕರ ಮತ ಯಾರಿಗೆ?